ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯುತ್ ಪ್ರವಹಿಸುವ ಕಾರ್ಯ: ಕೆಪಿಟಿಸಿಎಲ್ ಎಚ್ಚರಿಕೆ

Rashmi Kasaragodu
Updated On : 25 Jun 2014, 12:02 pm

ರಾಯಚೂರು: ರಾಯಚೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 220 ಕೆವಿ ವಿದ್ಯುತ್ ಉಪ ಕೇಂದ್ರದಿಂದ 110 ಕೆವಿಎಸ್ಸಿ ಲೈನ್ ಅನ್ನು ಮಟಮಾರಿವರೆಗೆ ನಿರ್ಮಿಸಿದ್ದು, ಈ ಮಾರ್ಗದಲ್ಲಿ ಜೂ.26ರಂದು ವಿದ್ಯುತ್ ಪ್ರವಹಿಸುವ ಕಾರ್ಯ ನಡೆಯಲಿದ್ದು ಈ ಬಗ್ಗೆ ಎಚ್ಚರದಿಂದಿರಲು ಸೂಚಿಸಲಾಗಿದೆ.
ಪ್ರಸರಣ ಮಾರ್ಗವು ರಾಯಚೂರಿನ ಬಸವೇಶ್ವರ ಕಾಲನಿ, ಬಂದೇನವಾಜ್ ಕಾಲನಿ, ಅಸ್ಕಿಹಾಳ, ಕೃಷಿ ವಿವಿ, ಹೊಸೂರು, ಆಶಾಪುರ, ಮರ್ಚೇಟಹಾಳ್, ಗಾರಲದಿನ್ನಿ, ಮಟಮಾರಿ ಮತ್ತು ಆಸುಪಾಸಿನ ಗ್ರಾಮದ ಸರಹದ್ದಿನಲ್ಲಿ ಹಾದು ಹೋಗಿದ್ದು, ಈ ಪ್ರಸರಣ ಮಾರ್ಗದಲ್ಲಿ ಜೂ.26 ಅಥವಾ ಆನಂತರದ ದಿನಗಳಲ್ಲಿ ವಿದ್ಯುದ್ದೀಕರಿಸಲಾಗುತ್ತದೆ ಎಂದು ಕೆಪಿಟಿಸಿಎಲ್ ತಿಳಿಸಿದೆ.
ಸಾರ್ವಜನಿಕರು ಈ ವಿದ್ಯುತ್ ಮಾರ್ಗಗಳ ವಿದ್ಯುತ್ ಗೋಪುರ ಹತ್ತುವುದಾಗಲಿ, ಅವುಗಳಿಗೆ ದನಕರು ಕಟ್ಟುವುದನ್ನು ಮಾಡಿದರೆ ಸಾರ್ವಜನಿಕರ ಆಸ್ತಿ-ಪಾಸ್ತಿ ಪ್ರಾಣಕ್ಕೆ ಅಂಥ ವರ್ತನೆಯಿಂದ ಹಾನಿಯಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement