ನೀರು ಪೂರೈಕೆಯಲ್ಲಿ ವ್ಯತ್ಯಯ
ರಾಯಚೂರು: ನಗರದ ಜೆಸ್ಕಾಂ ವಿದ್ಯುತ್ ನಿಗಮದಿಂದ ಒಂದು ವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿರುವ ಹಿನ್ನೆಲೆಯಲ್ಲಿ ನಗರದ ಜನತೆಗೆ ಕುಡಿಯುವ ನೀರು ಪೂರೈಸುವಲ್ಲಿ ಅಡಚಣೆಯಾಗಲಿದೆ ಎಂದು ನಗರಸಭೆ ತಿಳಿಸಿದೆ. ಈ ಕುರಿತು ಪೌರಾಯುಕ್ತರು ಪ್ರಕಟಣೆ ನೀಡಿದ್ದು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ನಗರಸಭೆ ಕುಡಿಯುವ ನೀರಿನ ಘಟಕಗಳಲ್ಲಿ ನೀರೆತ್ತುವ ಮೋಟಾರ್, ಸ್ಟಾಟರ್ಗಳು ಮತ್ತು ಮುಖ್ಯ ಪೈಪ್ಲೈನ್ಗಳು ದುರಸ್ತಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.
ಲೋಕ ಅದಾಲತ್ ನಾಳೆ
ರಾಯಚೂರು: ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ್ ಅದಾಲತ್ಲನ್ನು ಜೂ.28ರಂದು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಉಚ್ಛ ನ್ಯಾಯಾಲಯ ಮತ್ತು ಕಾರ್ಯ ನಿರ್ವಾಹಕ ಆಧ್ಯಕ್ಷರಾದ ನ್ಯಾ. ಎನ್.ಕೆ. ಪಾಟೀಲ್ ಉದ್ಘಾಸಲಿದ್ದು, ಅಧ್ಯಕ್ಷತೆಯನ್ನು ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾ. ಎ.ಎಸ್. ಪಚ್ಚಾಪೂರೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಬಳ್ಳಾರಿ ಪ್ರಧಾನ ಕಚೇರಿ ಅಧ್ಯಕ್ಷ ಎಂ.ಜಿ. ಭಟ್, ಆಶೋಕ್ ನಿಜಗಣ್ಣವರ್, ನ್ಯಾ. ಪಿ.ಜಿ.ಎಂ. ಪಾಟೀಲ್ ಪಾಲ್ಗೊಳ್ಳಲಿದ್ದಾರೆ.