ಪಿಯು, ಪದವಿ ಕಾಲೇಜು ಹಾಸ್ಟೆಲ್ ಪ್ರವೇಶಾವಕಾಶ
ರಾಯಚೂರು: ತಾಲೂಕಿನ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆ ಹಾಸ್ಟೆಲ್‌ಗಳಿಗೆ ಪ್ರವೇಶಕ್ಕಾಗಿ ಎಲ್ಲ ಪಿಯುಸಿ, ಸಾಮಾನ್ಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು ಜು.15ರವರೆಗೆ ಅರ್ಜಿ ಸಲ್ಲಿಸಬಹುದು. ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರಾಯಚೂರು ಅವರಿಗೆ ಅರ್ಜಿ ಕಳುಹಿಸಬೇಕು. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಆಶಾಪೂರ ರಸ್ತೆ, ರಾಯಚೂರು, ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ ಯರಗೇರಾ ಲೇಔಟ್, ರಾಯಚೂರು, ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಅರಬ್ ಮೊಹಲ್ಲಾ ರಾಯಚೂರು, ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಅರಬ್ ಮೊಹಲ್ಲಾ ರಾಯಚೂರು, ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಪಶ್ಚಿಮ ಪೊಲೀಸ್ ಸ್ಟೇಷನ್ ಎದುರುಗಡೆ ರಾಯಚೂರು ಈ ಹಾಸ್ಟೆಲ್‌ಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಉರ್ದು ಶಾಲೆಗೆ ಮಲತಾಯಿ ಧೋರಣೆ: ಫಾರೂಕ್ ಹುಸೇನ್
ಸಿಂಧನೂರು: ಸ್ಥಳೀಯ ಮಹಿಬೂಬ್ ಕಾಲೋನಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೈಯದ್ ಅರ್ಷಿಯಾ ನಸೀಮ್ ಫಾತೀಮ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ ಈವರೆಗೆ ಶಿಕ್ಷಕರ ನೇಮಕ ಮಾಡಿಲ್ಲ ಎಂದು ಉನ್ನತೀಕರಿಸಿದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸೈಯದ್ ಫಾರೂಕ್ ಹುಸೇನ್ ಆಪಾದಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಜೂ.21ರಂದು ರಾಜಿನಾಮೆ ನೀಡಿದ್ದರೂ ಡಿಡಿಪಿಐ ಮಾಹಿತಿ ಕಳುಹಿಸದೆ ಬಿಇಒ ಕರ್ತವ್ಯಲೋಪ ಎಸಗಿದ್ದಾರೆ. ನಿಗದಿತ ಅವಧಿಯಲ್ಲಿ ಖಾಲಿ ಹುದ್ದೆಯ ಬಗ್ಗೆ ಮಾಹಿತಿ ತಿಳಿಸದ ಕಾರಣ ಜೂ.28ರಂದು ನಡೆಯುವ ಶಿಕ್ಷಕರ ಕೌನ್ಸೆಲಿಂಗ್‌ನಲ್ಲಿ ತಮ್ಮ ಶಾಲೆಯಲ್ಲಿನ ಶಿಕ್ಷಕರ ಕೊರತೆ ಸೇರ್ಪಡೆಯಾಗಿಲ್ಲ. ಕಾರಣ ಶಿಕ್ಷಕರ ನೇಮಕ ಮಾಡಲು ಬರುವುದಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ. ವಿಜ್ಞಾನ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಫಾರೂಕ್ ಎಚ್ಚರಿಸಿದ್ದಾರೆ.