ಗ್ರಾಪಂ ಉಪ ಚುನಾವಣೆ; ಶೇ.62ರಷ್ಟು ಮತದಾನ
ಮಸ್ಕಿ: ಸ್ಥಳೀಯ ಗ್ರಾಮ ಪಂಚಾಯಿತಿಯ ತೆರವಾಗಿದ್ದ 11 ಸ್ಥಾನಗಳಿಗೆ ಭಾನುವಾರ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಪಟ್ಟಣದ ಗ್ರಾಪಂ ಕಾರ್ಯಾಲಯ, ಉರ್ದು ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧೆಡೆ ಸ್ಥಾಪಿಸಿದ್ದ 9 ಮತಗಟ್ಟೆಗಳ ಎದುರು ಸಾಲಾಗಿ ನಿಂತು ಮತದಾರರು ಮತದಾನ ಮಾಡಿದರು. ಅಂದಾಜಿನಂತೆ ಶೇ.62ರಷ್ಟು ಮತದಾನವಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.