ಆಶೀಹಾಳ ತಾಂಡಾದಲ್ಲಿ ಶೇ.67.58 ಮತದಾನ
ಮುದಗಲ್:ಸಮೀಪದ ಆಶೀಹಾಳ ತಾಂಡಾದಲ್ಲಿ ನಡೆದ ಗ್ರಾಮ ಪಂಚಾಯತಿಯ ಒಂದು ಕ್ಷೇತ್ರದ ಚುನಾವಣೆಗೆ ಶಾಂತಿಯುತವಾಗಿ ಶೇ. 67.58ರಷ್ಟು ಮತದಾನವಾಗಿದೆ. ಚುನಾವಣೆಯಲ್ಲಿ ಹಿಂದಿನ ಸದಸ್ಯ ರಾಘವೇಂದ್ರನಾಯ್ಕ ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಸಲಾಯಿತು. ಕಣದಲ್ಲಿ ರಾಮಪ್ಪ, ಗಂಗಾಧರ ಶಾಸ್ತ್ರಿ ಮತ್ತು ಬೋಧುನಾಯ್ಕ ಎನ್ನುವ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾನ ಶಾಂತಿಯುತವಾಗಿತ್ತು. ಮತದಾನಕ್ಕಾಗಿ ಆಟೋರೀಕ್ಷಾಗಳಲ್ಲಿ ಕರೆತರುವದು ಸರ್ವೇ ಸಾಮಾನ್ಯವಾಗಿತ್ತು. ಮತದಾನಕ್ಕೆ ಬೆಳಿಗ್ಗೆಯಿಂದಲೇ ಉತ್ಸಾಹ ಕಂಡು ಬಂದಿತಾದರೂ, ಮಧ್ಯಾನ್ಹದ ವೇಳೆಗೆ ಕೊಂಚ ಇಳಿಮುಖವಾಗಿತ್ತು. ನಂತರ ಮತದಾನ ಚುರುಕುಗೊಂಡಿತು.