ಶಿರಡಿ ಸಾಯಿಬಾಬಾ ಮೆರವಣಿಗೆ
ಲಿಂಗಸ್ಗೂರು: ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ ಆರನೇ ವಾರ್ಷೀಕೋತ್ಸವ ನಿಮಿತ್ತ ಸಾಯಿ ಬಾಬಾರ ಉತ್ಸವ ಮೂರ್ತಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ಜರುಗಿತು.
ಸಾಯಿಬಾಬಾ ಮಂದಿರದ ವಾರ್ಷೀಕೋತ್ಸವದ ಅಂಗವಾಗಿ ಶನಿವಾರ ಸಂಜೆ ಆಕಾಶವಾಣಿ ಕಲಾವಿದ ಮೌನೇಶ ಕುಮಾರ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಹಾಗೂ ಕರ್ನಾಟಕ ವಿದ್ಯುತ್ ನಿಗಮ ಉತ್ತರ ಕನ್ನಡದ ಮುಖ್ಯ ಅಭಿಯಂತರ ಶಂಕರ ದೇವನೂರು ಅವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು. ರವಿವಾರ ಸಾಯಿ ಕಾಕಡ ಆರತಿ, ಗಣಹೋಮ, ಮಹಾಕ್ಷೀರಾಭಿಷೇಕ ಹಾಗೂ ಪ್ರಥಮ ಆರತಿ, ಸತ್ಯನಾರಾಯಣ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಸಂಜೆ ಸಾಯಿ ಬಾಬಾರ ಭಾವಚಿತ್ರ ಮತ್ತು ಉತ್ಸವ ಮೂರ್ತಿ ಮೆರವಣಿಗೆ ಕಾರ್ಯಕ್ರಮಗಳು ಜರುಗಿದವು.
ಮೆರವಣಿಗೆಯಲ್ಲಿ ಶಿರಡಿ ಸಾಯಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಂ. ಪ್ರತಾಪಶೆಟ್ಟಿ, ಮುಖಂಡರಾದ ಎಂ.ಶ್ರೀನಿವಾಸರೆಡ್ಡಿ, ಬಸವರಾಜಗೌಡ ಗಣೇಕಲ್, ಎಲ್.ಆರ್. ಮೇಟಿ, ಡಾ.ಎಂ.ವಿ. ಜೋಶಿ, ಡಾ. ಗುರರಾಜ ದೇಶಪಾಂಡೆ, ಡಾ. ಶರಣಗೌಡ, ರಾಜನಿಕಾಂತ ಶೆಟ್ಟಿ, ಶೋಭಾಶೆಟ್ಟಿ, ವಂದನಾ, ಸುಜಾತ ಕೊಳ್ಳ, ಶಾರದಾ ಪಾಟೀಲ್, ಚಂದ್ರಶೇಖರ ಪಾಟೀಲ, ಶ್ರೀನಿವಾಸ ಕೊಳ್ಳ ಪಾಲ್ಗೊಂಡಿದ್ದರು.