ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಾಲಹಳ್ಳಿ ಜಿಪಂ; ಬಿಜೆಪಿಗೆ ಗೆಲವು

Mainashree
Updated On : 6 Mar 2014, 11:29 am

ದೇವದುರ್ಗ: ತಾಲೂಕಿನ ಜಾಲಹಳ್ಳಿ ಎಸ್ಟಿ ಮೀಸಲು ಜಿಪಂ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹಾದೇವಮ್ಮ ಯರಕಮಟ್ಟಿ ಭರ್ಜರಿ ಗೆಲವು ಪಡೆಯುವ ಮೂಲಕ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ.
ಪಟ್ಟಣದಲ್ಲಿ ಬುಧವಾರ ನಡೆದ ಮತಗಳ ಎಣಿಕೆ ಕಾರ್ಯದ ನಂತರ ಬಿಜೆಪಿ ಅಭ್ಯರ್ಥಿ ಮಹಾದೇವಮ್ಮ ಯರಕಮಟ್ಟಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಲ್ಲಮ್ಮ ಅವರಿಗಿಂತ 1678 ಮತಗಳ ಅಂತರದಿಂದ ಗೆಲವು ಕಂಡರು. ವಿಜಯಿ ಅಭ್ಯರ್ಥಿ ಬಿಜೆಪಿಯ ಮಹಾದೇವಮ್ಮ ಅವರಿಗೆ 10,569 ಮತಗಳು ಬಂದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಲ್ಲಮ್ಮ ಅವರಿಗೆ 8891 ಮತಗಳು ದೊರೆತಿವೆ. ಅದೇ ರೀತಿ ಜೆಡಿಎಸ್ ನ ರಂಗಮ್ಮ ಪೂಜಾರಿ ಅವರಿಗೆ 1355 ಮತಗಳು ಬಂದಿವೆ ಎಂದು ಚುನಾವಣಾಧಿಕಾರಿಗಳು ಪ್ರಕಟಿಸಿದರು.
ಸಂಭ್ರಮಾಚರಣೆ: ಜಾಲಹಳ್ಳಿ ಜಿಪಂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಿಸಿದರು. ಪಟಾಕಿ ಸಿಡಿಸಿ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಮತದಾರರು ಬಿಜೆಪಿ ಪರ ಒಲವು ತೋರಿದ್ದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಅದರಲ್ಲೂ ಕಾಂಗ್ರೆಸ್ ದ ಶಾಸಕರಿರುವ ದೇವದುರ್ಗ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಕಾಂಗ್ರೆಸ್ ಸೋತಿರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
ಗೆಲವು ಸಂತಸ: ಜಾಲಹಳ್ಳಿ ಜಿಪಂ ಕ್ಷೇತ್ರದಲ್ಲಿನ ತಮ್ಮ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿಯ ಮಹಾದೇವಮ್ಮ ಅವರು ತಮ್ಮ ಸಾಧನೆಗೆ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಶಿವನಗೌಡ ನಾಯಕ ಅವರೇ ಕಾರಣ. ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ತಮ್ಮ ಗೆಲವಿಗೆ ದಾರಿ ಮಾಡಿದವು ಎಂದು ತಿಳಿಸಿ, ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ಸೇರಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.ಬಿಜೆಪಿ ಮುಖಂಡರಾದ ವೆಂಕಟೇಶ ಪೂಜಾರಿ, ಜಗನ್ನಾಥರಾಯ ಪಾಟೀಲ್, ಗುರುರಾಜರಾವ್ ದೇಸಾಯಿ, ವೀರಣ್ಣ ಪಾಣಿ, ಈರಣ್ಣ ಬಳೆ, ಜಿಪಂ ಸದಸ್ಯ ಪ್ರಕಾಶ ಪಾಟೀಲ್, ಬಿಜೆಪಿ ತಾಲೂಕು ಅಧ್ಯಕ್ಷ ಜಂಬಣ್ಣ ನೀಲೋಗಲ್, ಬಸವರಾಜ ಗಾಣದಾಳ, ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ, ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ರಂಗಪ್ಪ ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement