ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಟೋಲ್ ಫೀ ವಸೂಲಿಗೆ ವಿರೋಧ

Mainashree
Updated On : 7 Mar 2014, 11:03 am

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ವಸೂಲಿ ಮೂಲಕ ವಾಹನ ಸವಾರರನ್ನು ವಂಚಿಸಲು ಅವಕಾಶ ಮಾಡಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಹೆದ್ದಾರಿಗಳಲ್ಲಿ ವಾಹನ ಸವಾರರಿಂದ ಟೋಲ್ ಫೀ ಸಂಗ್ರಹ ನಿಲ್ಲಿಸುವಂತೆ ಕರವೇ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ಖಾಸಗಿಯವರಿಗೆ ಅನುಕೂಲ ಕಲ್ಪಿಸುತ್ತಿವೆ. ಈ ಮೂಲಕ ಬಡವರ ಹಾಗೂ ಜನಸಾಮಾನ್ಯರಿಗೆ ಹೆದ್ದಾರಿಗಳಲ್ಲಿ ಸಂಚರಿಸುವ ವೇಳೆ ಟೋಲ್ ಫೀ ತೆರುವಂತೆ ಮಾಡಿವೆ ಎಂದು ದೂರಿದರು.
ಸಾರ್ವಜನಿಕ ಖಾಸಗಿ ಸಹಭಾಗಿತ್ವ ಪದ್ಧತಿ ಮತ್ತು ನಿರ್ಮಾಣ ನಿರ್ವಹಣೆ ಮತ್ತು ಹಸ್ತಾಂತರದಂಥ ಯೋಜನೆಗಳ ಮೂಲಕ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಖಾಸಗಿಯವರಿಗೆ ಕೋಟ್ಯಂತರ ರು. ಲೂಟಿ ಹೊಡೆಯಲು ಅವಕಾಶ ಮಾಡಿದೆ. ಅದರಿಂದ ಹೆದ್ದಾರಿಗಳಲ್ಲಿ ಸಂಚರಿಸಲೂ ಜನತೆ ಭಯಗೊಳ್ಳುವಂಥ ಸ್ಥಿತಿಯಿದೆ. ಅನಗತ್ಯ ವೆಚ್ಚದ ಆರ್ಥಿಕ ಹೊರೆ ಹೊರುವಂಥ ಸ್ಥಿತಿಯಿದೆ ಎಂದು ಟೀಕಿಸಿದರು.
ಕಾರಣ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆದ್ದಾರಿ ಶುಲ್ಕ ವಸೂಲಿ ಸ್ಥಗಿತಗೊಳಿಸಬೇಕು. ಜನತೆಗೆ ಅನುಕೂಲ ಕಲ್ಪಿಸುವಂತೆ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವೀರೇಶ್ ಹೀರಾ, ಪ್ರಮುಖರಾದ ವೀರೇಶ್ ರೆಡ್ಡಿ, ಶಾಮ ಮಹೇಂದ್ರಕರ್, ತುಳಜಾರಾಮ್ ಬಳಂಕರ್, ವೆಂಕಟೇಶ ರೆಡ್ಡಿ, ವಿರುಪನಗೌಡ, ಶಿವಶಂಕರ್ ಹಿರೇಮಠ, ರಾಜು ಭವಾನಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement