ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂದಿನ ಅನುಭವ ಮಂಟಪ, ಇಂದಿನ ಪಾರ್ಲಿಮೆಂಟ್

Rashmi Kasaragodu
Updated On : 10 Mar 2014, 11:24 am

ಮುದಗಲ್: ಅಂದಿನ ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್, ವಿಶ್ವಸಂಸ್ಥೆ, ಮುಕ್ತ ವಿಶ್ವವಿದ್ಯಾನಿಲಯಗಳು ಎಂದು ಬಸವ ಧರ್ಮ ಪ್ರವಚನಕಾರ ಡಾ. ಈಶ್ವರ ಮಂಟೂರು ಹೇಳಿದರು.
ಸ್ಥಳೀಯ ವಿಜಯಮಹಾಂತೇಶ್ವರ ಮಠದಲ್ಲಿ ಏರ್ಪಡಿಸಿದ್ದ ಬಸವ ಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದಿನ ಅನುಭವ ಮಂಟಪವನ್ನು ಕಲ್ಲು, ಕಟ್ಟಿಗೆ, ಇಟ್ಟಿಗೆಯಿಂದ ನಿರ್ಮಿಸಿದ್ದಲ್ಲ ಅದೊಂದು ಬಯಲು ಮಂಟಪವಾಗಿತ್ತು. ಭಾವನಾತ್ಮಕ, ಆಧ್ಯಾತ್ಮೀಕ, ಶಿವಮಂಟಪವಾಗಿತ್ತು. ಶೂನ್ಯ ಪೀಠದಲ್ಲಿ 770 ಜನ ಅಮರ ಗಣಗಂಗಳು ಆಧ್ಯಾತ್ಮ ಬಲ್ಲವರಾಗಿದ್ದು, ಲಕ್ಷದ ಮೇಲೆ ತೊಂಬತ್ತಾರು ಜನರಿಗೆ ಪ್ರತಿ ನಿತ್ಯ ಪ್ರಸಾದ ನೀಡುತ್ತಿದ್ದರು ಎಂದರು.
ಮತ ಪವಿತ್ರವಾದದು: ಮತ ಪವಿತ್ರವಾದುದು ಅದನ್ನು ಹಣಕ್ಕೆ, ಹೆಂಡ, ಸಾರಾಯಿಗೆ ಮಾರಾಟ ಮಾಡಿಕೊಳ್ಳಬಾರದು. ಮತ ದಾನ ಮಾಡಬೇಕು, ಆಗಲೇ ಚುನಾಯಿತ ಜನಪ್ರತಿನಿಧಿಗಳ ಬಳಿ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳುವ ನೈತಿಕತೆ, ಹಕ್ಕು ಉಳಿಯುತ್ತದೆ. ಚುನಾವಣೆಯಲ್ಲಿ ನಿಷ್ಠಾವಂತರನ್ನ, ಜನರ ನೋವು, ನಲಿವಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಮನುಷ್ಯ ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಯುವಕರು ದುಶ್ಚಟಗಳನ್ನು ಬಿಟ್ಟು ಉತ್ತಮ ಆರೋಗ್ಯವಂತರಾಗಿ ದೇಶದ ಪ್ರಗತಿಗೆ ಶ್ರಮಿಸಬೇಕು. ಅಂದಾಗಲೇ ಶಿವ ಶರಣರ ತತ್ವ ಆದರ್ಶಗಳು ಸಾಕಾರವಾಗುತ್ತವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಆರ್ಥಪೂರ್ಣವಾಗಿರುತ್ತವೆ ಎಂದರು.
ವಿಧವೆಯರಿಗೆ ಸೀರೆ: ಮಾ.8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದ್ದರಿಂದ ಕಾರ್ಯಕ್ರಮದಲ್ಲಿ 21 ಜನ ವಿಧವೆಯರಿಗೆ ಮತ್ತು ಮುತೈದೆಯರಿಗೆ ಸೀರೆ, ವಿಭೂತಿ, ಶರಣರ ವಚನ ಪುಸ್ತಕಗಳನ್ನು ಡಾ.ಈಶ್ವರ ಮಂಟೂರು ವಿತರಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಅಮರೇಗೌಡ ಪಾಟೀಲ್, ಸುರೇಂದ್ರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಗುರುಬಸಪ್ಪ ಸಜ್ಜನ್, ಚನ್ನಬಸನಗೌಡ ಕನ್ನಾಳ, ಶಿವಪ್ಪ ಸುಂಕದ್, ಚಂದ್ರಣ್ಣ ಗಂಗಾವತಿ, ವಿರುಪಾಕ್ಷಪ್ಪ ನಾಗಲೀಕರ, ಯೋಗೇಶಪ್ಪ ಗೌರಿಪೂರ, ನಿಂಗಪ್ಪ ಹಣಗಿ, ನ್ಯಾಮತ್ ಖಾದ್ರಿ, ಎಲ್.ಟಿ. ನಾಯಕ್, ರಾಜು ಮಾಲೀಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement