ಅಕಾಲಿಕ ಮಳೆ ಹಾನಿ ಅಧಿಕಾರಿಗಳ ಪರಿಶೀಲನೆ
ಲಿಂಗಸ್ಗೂರು: ತಾಲೂಕಿನ ಸುಕ್ಷೇತ್ರ ಅಮರೇಶ್ವರ, ಗೋನವಾಟ್ಲ, ಯಳಗುಂದಿ, ಗುಂತಗೋಳ, ದೇವರಭೂಪೂರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಭಾಗದಲ್ಲಿ ಶುಕ್ರವಾರ ಸಂಜೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಮನೆ-ಬೆಳೆ ಹಾನಿಗೀಡಾಗಿದ್ದು, ಸಹಾಯಕ ಆಯುಕ್ತ ಟಿ. ಯೋಗೇಶ್ ಹಾಗೂ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾನಿ ಅಂದಾಜು: 2009ರಲ್ಲಿ ನೆರೆ ಹಾವಳಿ ಸಂಭವಿಸಿ ತಾಲೂಕಿನಾದ್ಯಂತ ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು. ಬಳಿಕ 2014 ಮಾ. 7ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ ಸುರಿದು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮನೆ, ಬೆಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಪರಿಹಾರ ಒದಗಿಸಲು ಕೋರಲಾಗುವುದು. ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಾಸ್ತವಿಕ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು.
ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸಹಾಯಕ ಆಯುಕ್ತ ಟಿ. ಯೋಗೇಶ್ ಎಚ್ಚರಿಕೆ ನೀಡಿದರು.
ಈ ವೇಳೆ ಭೂ ಮಾಪನಾ ಇಲಾಖೆ ಅಧಿಕಾರಿ ಸೃಜಯ್, ಜಿಪಂ ಸದಸ್ಯ ಎಚ್.ಬಿ. ಮುರಾರಿ, ಜಿಪಂ ಮಾಜಿ ಸದಸ್ಯ ರಾಜಾ ಶ್ರೀನಿವಾಸ ನಾಯಕ, ರೈತ ಮುಖಂಡರಾದ ಅಮರಣ್ಣ ಗುಡಿಹಾಳ, ಸಿದ್ದೇಶ ಗೌಡೂರು, ಮಾನಪ್ಪ ಹಂಚಿನಾಳ, ಸಂಪಮ್ಮ ಗುಡುಗುಂಟಿ, ದುರುಗಪ್ಪ ಯಳಗುಂದಿ, ಅಮರಣ್ಣ, ಬಸವರಾಜ, ಶರಣಪ್ಪ, ಸಿದ್ದಪ್ಪ, ಗದ್ದೆಪ್ಪ, ಹನುಮಂತ, ಮುದುಕಪ್ಪ ಸೇರಿದಂತೆ ಇದ್ದರು.