ಅಪರಿಚಿತ ಶವ ಪತ್ತೆ
ರಾಯಚೂರು: ಮಾನವಿ ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆಯ 76ನೇ ವಿತರಣೆ ಕಾಲುವೆ ನೀರಿನಲ್ಲಿ ಅಪರಿಚಿತ ಶವ ತೇಲಿ ಬಂದಿದೆ. ಮೃತ 40ರಿಂದ 45 ವರ್ಷ ವಯಸ್ಸಿನವನಾಗಿದ್ದು, ಮೃತನ ಶವ ತಾಲೂಕಿನ ನಡುಗಡ್ಡೆ ಕ್ಯಾಂಪ್- ಮಲ್ಲದಗುಡ್ಡ ಗ್ರಾಮಗಳ ಮಧ್ಯೆ ತೇಲಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.