ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಾಶ್ಚಾತ್ಯ ವ್ಯಾಮೋಹ; ದೇಶಿ ಸಂಗೀತ- ಸಂಸ್ಕೃತಿಗೆ ಮಂಕು

Rashmi Kasaragodu
Updated On : 10 Mar 2014, 11:19 am

ಲಿಂಗಸ್ಗೂರು: ಪಾಶ್ಚಿಮಾತ್ಯ ರಾಷ್ಟ್ರಗಳ ಭರಾಟೆಯಲ್ಲಿ ದೇಶದ ಸಂಗೀತ, ಸಂಸ್ಕೃತಿ, ಸಂಸ್ಕಾರ ಮಂಕಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳಲ್ಲಿ ನಮ್ಮ ರಾಷ್ಟ್ರದ ಸಂಸ್ಕೃತಿ, ಸಾಂಸ್ಕೃತಿಕ ಚಟುವಟಿಕೆ ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕೆಂದು ಪತ್ರಕರ್ತ ಅಮರೇಶಸ್ವಾಮಿ ಬಲ್ಲಟಗಿ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕಲಾ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಗೀತ, ಭರತನಾಟ್ಯ ಹಾಗೂ ವೆಸ್ಟರ್ನ್ ನೃತ್ಯ ಕಲಿತ ಮಕ್ಕಳಿಗೆ ಅಭಿನಂದನಾ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ನಂತರ ಮಕ್ಕಳಿಗೆ ಕಲಾ ಕೇಂದ್ರದ ಪರವಾಗಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹ: ವಿಶ್ವದಲ್ಲಿ ದೇಶದ ಸಂಗೀತ, ಸಂಸ್ಕೃತಿ, ಸಂಸ್ಕಾರ ಶ್ರೇಷ್ಠ ಸ್ಥಾನ ಪಡೆದಿದ್ದು, ನಮ್ಮ ಪೂರ್ವಜರು ಕಲೆಗೂ ಕೂಡ ಅಷ್ಟೇ ಮಹತ್ವ ನೀಡಿದ್ದಾರೆ. ಕಲ್ಲನ್ನು ಮಾತನಾಡಿಸುವ ಶಕ್ತಿ ಸಂಗೀತಕ್ಕಿದೆ. ಇಂತಹ ಶ್ರೇಷ್ಠ ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರ ಹೊಂದಿದ ನಮ್ಮ ದೇಶ ಇತ್ತೀಚಿನ ದಿನಮಾನಗಳಲ್ಲಿ ವೆಸ್ಟರ್ನ್ ಪದ್ಧತಿಗೆ ಜೋತುಬಿದ್ದು ದೇಶಿಯ ಸೊಗಡು ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಸಂಸ್ಕೃತಿ ಉಳಿಸಿ ಬೆಳೆಸಿ: ಭರತನಾಟ್ಯ ಗುರೂಜಿ ಸಂಗಮೇಶ ಖಾಸ್ಗತೇಶ್ವರ ಮಠ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಭರತನಾಟ್ಯ ಅತ್ಯುತ್ತಮ ಕಲೆ ಎಂದು ಅರಿತು ಅದರಲ್ಲಿ ಪಾಂಡಿತ್ಯ ಪಡೆದು ಸುಮಾರು 25 ವರ್ಷಗಳಿಂದ ಮಕ್ಕಳಿಗೆ ಭರತನಾಟ್ಯ ವಿದ್ಯೆ ಕಲಿಸುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿರುವುದು ನನಗೆ ಸಂತಸ ತಂದಿದೆ. ಪಾಲಕರು, ಯುವಜನಾಂಗ ನಮ್ಮ ದೇಶದ ಸಂಗೀತ, ಕಲೆ, ಸಂಸ್ಕತಿ, ಆಚರಣೆ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಈ ವೇಳೆ ಕಲ್ಪವೃಕ್ಷ ಕಲಾ ಕೇಂದ್ರದ ಅಧ್ಯಕ್ಷೆ ಉಮಾ ಆನಂದ, ಕಾರ್ಯದರ್ಶಿ ಆನಂದ ಭೋವಿ, ಸಂಗೀತ ಶಿಕ್ಷಕ ಸಂಗಮೇಶ ಹಿರೇಮಠ, ವೆಸ್ಟರ್ನ್ ಡ್ಯಾನ್ಸ್ ಶಿಕ್ಷಕ ರಂಗನಾಥ ಸೇರಿದಂತೆ ಇದ್ದರು.   ಸಂಗೀತ, ಭರತನಾಟ್ಯ ಹಾಗೂ ವೆಸ್ಟರ್ನ್ ನೃತ್ಯ ಕಲಿತ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement