ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಯುವ ವೇದಿಕೆ ಸಂಘಟನೆಗೆ ಒತ್ತು'

Rashmi Kasaragodu
Updated On : 12 Mar 2014, 1:10 am

ಸುರಪುರ: ಯಾದಗಿರಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಯುವವೇದಿಕೆ ಸಂಘಟನೆಗೆ ಒತ್ತು ನೀಡಿ ಗ್ರಾಮ ಘಟಕಗಳನ್ನು ಸ್ಥಾಪಿಸಿ ಶ್ರಮಿಸಲಾಗುತ್ತಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಹೇಳಿದರು. ಇಲ್ಲಿಯ ಜಿಲ್ಲಾ ಕಾರ್ಯಾಲಯದಲ್ಲಿ ಮಂಡಗಳ್ಳಿ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ ಅವರು, ಈಗಾಗಲೇ ಜಿಲ್ಲೆಯ ಮೂರು ತಾಲೂಕು ಕೇಂದ್ರ, ಗ್ರಾಮಗಳ ಘಟಕಗಳಿಗೆ ಸದಸ್ಯರನ್ನು ನೇಮಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಹೊಸ ಘಟಕಗಳು ಸಂಘಟನೆಯ ತತ್ತ್ವ ಸಿದ್ಧಾಂತಕ್ಕೆ ಬದ್ಧವಾಗಿ ಸಮಾಜ ಹಾಗೂ ಗ್ರಾಮದ ಅಭಿವೃದ್ಧಿಗೆ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಸೇವೆಗೈಯುತ್ತಿವೆ ಎಂದರು. ವೇದಿಕೆಯ ಜಿಲ್ಲಾ ಸಂಚಾಲಕ ಚಂದ್ರಕಾಂತ ಡೊಣ್ಣೂರು, ಮುಖಂಡರಾದ ಸಂಗಮೇಶ ಅಣಬಿ, ಚನ್ನಯ್ಯಸ್ವಾಮಿ ಇದ್ದರು. ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ: ಸಿದ್ರಾಮರೆಡ್ಡಿ-ಗೌರವಾಧ್ಯಕ್ಷ, ಮಲ್ಕಣ್ಣ ಶರಣಪ್ಪ ಚಿಂತಿ(ಅಧ್ಯಕ್ಷ), ಮಹದೇವರೆಡ್ಡಿ ಸಂಕನೂರ, ಅಂಬ್ರೇಶ ಕಟಮಳ್ಳಿ, ನಾಗರಾಜ ಬೇವಿನಾಳ(ಉಪಾಧ್ಯಕ್ಷ), ಶರಣು ಕಾಟಮಳ್ಳಿ(ಪ್ರ. ಕಾರ್ಯದರ್ಶಿ), ಸುರೇಶ ಅಂಗಡಿ(ಸಹ ಕಾರ್ಯದರ್ಶಿ), ಬನಯ್ಯ ಹಿರೇಮಠ(ಸಂಘಟನಾ ಕಾರ್ಯದರ್ಶಿ), ಜೆ.ಹೆಚ್.ಫರೆಡ್ಡಿ (ಖಜಾಂಜಿ).
'ಪಂ. ಪುಟ್ಟರಾಜರ ಕೊಡುಗೆ ಅಪಾರ'
ಸುರಪುರ: ಅಸಂಖ್ಯಾತ ದೃಷ್ಟಿಹೀನರ ಬಾಳಿಗೆ ಬೆಳಕಾದ ಪಂ.ಪುಟ್ಟರಾಜ ಕವಿ-ಗವಾಯಿಗಳು, ಅವತಾರ ಪುರುಷರು. ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಅಮರಯ್ಯಸ್ವಾಮಿ ಜಾಲಿಬೆಂಚಿ ತಿಳಿಸಿದರು.  ತಾಲೂಕಿನ ಬಿ.ದೊಡ್ಡಿ ಸಕಿಪ್ರಾ ಶಾಲೆಯಲ್ಲಿ ಪುಟ್ಟರಾಜ ಗವಾಯಿಗಳ ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪಂ.ಪುಟ್ಟರಾಜರು ನಡೆದಾಡುವ ದೇವರಾಗಿದ್ದರು. ಅವರು ಭೂಮಿಯ ಮೇಲಿನ ಶಾಶ್ವತ ನಕ್ಷತ್ರವಾಗಿ ಸೂರ್ಯ ಚಂದ್ರರಿರುವವರೆಗೂ ಮಿನುಗುತ್ತಿರುತ್ತಾರೆ ಎಂದರು. ಸಂಗೀತ ಕಲಾವಿದ ಶರಣುಕುಮಾರ ಜಾಲಹಳ್ಳಿ, ರಮೇಶ ಹವಲ್ದಾರ್, ಮಾಳಪ್ಪ ಸಾಹುಕಾರ್, ಶಿವಣ್ಣ ಹವಲ್ದಾರ್ ಮಾತನಾಡಿದರು. ಮುಖ್ಯಗುರು ಮಹಾಂತೇಶ ರೂಸನವರ ಅಧ್ಯಕ್ಷತೆ ವಹಿಸಿದ್ದರು.
ಇಂದು ಪಾದಯಾತ್ರೆ
ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಫೆ.12ರಂದು ಭಾರತ ನಿರ್ಮಾಣ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ಹೊಸಳ್ಳಿ ಕ್ರಾಸ್‌ನಿಂದ ಮುಸ್ಟೂರ್‌ರವರೆಗೆ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ ಜೈನ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement