ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಗುಲ್ಬರ್ಗ: ಜೀತ ವಿಮುಕ್ತಿ ಕರ್ನಾಟಕ ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆಯಡಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ರವಿಶಂಕರ್ ನಾಯಕ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಜಿಲ್ಲಾ ನ್ಯಾಯವಾದಿ ಸಂಘದ ಉಪಾಧ್ಯಾಕ್ಷ ಶರಣಮ್ಮ ಬಿ. ಪಾಟೀಲ್ ಮಾತನಾಡಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮೀ, ಕೆ.ಎಸ್. ಬಂಧು, ಅಂಬಿಕಾ ಶೆಟಗಾರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮಾನವ ಹಕ್ಕುಗಳ ಸಾಮಾಜಿಕ ನ್ಯಾಯ ಕೇಂದ್ರ ರಾಜ್ಯ ಸಂಯೋಜಕ ಸಂತೋಷ ಮೇಲ್ಮನಿ, ಸೀಮಾ ದೇಶಪಾಂಡೆ ಇದ್ದರು. ಸಂಗೀತಾ ರಾಠೋಡ ನಿರೂಪಿಸಿದರು. ಸರಿತಾ ರಾಠೋಡ ಸ್ವಾಗತಿಸಿದರು. ವಿಷ್ಣು ಬಸವನಾಳ ವಂದಿಸಿದರು.