ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಧಾರ್ಮಿಕ ಕಾರ್ಯಕ್ರಮಕ್ಕೂ ಪರವಾನಗಿ ಅಗತ್ಯ'

Rashmi Kasaragodu
Updated On : 13 Mar 2014, 12:07 pm

ಜೇವರ್ಗಿ: ಚುನಾವಣೆ ಸುಸೂತ್ರವಾಗಿ ನಡೆಯಲು ಚುನಾವಣಾ ಆಯೋಗ ಹಲವಾರು ನಿಯಮಗಳನ್ನು ಜಾರಿಗೊಳಿಸಿದ್ದು, ಮಠ- ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ನಡೆಸಲೂ ಪರವಾನಗಿ ಅಗತ್ಯ ಎಂದು ಸಹಾಯಕ ಚುನಾವಣಾಧಿಕಾರಿ ಜಿಯಾವುಲ್ ಕೆ. ಹೇಳಿದರು.
ಸ್ಥಳೀಯ ಮಿನಿ ವಿಧಾನಸೌಧದಲ್ಲಿ ಚುನಾವಣಾ ನಿಮಿತ್ತ ಕರೆದಿದ್ದ ಅಧಿಕಾರಿಗಳ ಹಾಗೂ ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಮತದಾನದ ಹಕ್ಕು ಪಡೆಯಲು ಮಾ.16ರವರೆಗೆ ನೋಂದಣಿ ಕಾರ್ಯ ನಡೆಯುತ್ತಿದ್ದು ಆಯಾ ಚುನಾವಣಾ ಮತಗಟ್ಟೆಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ ಎಂದರು.
ಸಾರ್ವಜನಿಕರು, ವ್ಯಾಪಾರಸ್ಥರು ಯಾರೇ ಆಗಿರಲಿ, 50 ಸಾವಿರದವರೆಗೆ ಹಾಗೂ ಅದಕ್ಕೂ ಮಿಗಿಲಾಗಿ ಹೆಚ್ಚಿನ ಹಣ ಸಾಗಿಸಲಾಗುತ್ತಿದ್ದರೆ ಅಧಿಕಾರಿಗಳಿಂದ ಪರವಾನಗಿ ಪಡೆಯತಕ್ಕದ್ದು. ಚುನಾವಣೆಯಲ್ಲಿ ಧ್ವನಿವರ್ಧಕ ಬಳಕೆಯನ್ನು ಬೆ.6ರಿಂದ ರಾತ್ರಿ 10ರವರೆಗೆ ಮಾತ್ರ ಬಳಕೆ ಮಾಡತಕ್ಕದ್ದು. ಅದಕ್ಕೆ ಪೊಲೀಸ್ ಇಲಾಖೆಯಿಂದ ಪರವಾನಗಿ ಕಡ್ಡಾಯ. ಚುನಾವಣಾ ಮತಗಟ್ಟೆಯ 200 ಮೀ. ಸುತ್ತಳತೆಯಲ್ಲಿ ಮತದಾನದ ದಿನ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ, ಸಿಪಿಐ ಬಾಸು ಚವ್ಹಾಣ, ಶರಣಬಸಪ್ಪ ಮುಡಬಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ದಂಡಪ್ಪ ಸಾಹು ಕುರಳಗೇರಾ, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ನೇರಡಗಿ, ಜೆಡಿಎಸ್ ಅಧ್ಯಕ್ಷ ಶಿವಾನಂದ ದ್ಯಾಮಗೊಂಡ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ  ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement