ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಮಹಿಳೆಯರು ಸಬಲತೆಗೆ ಬದಲಾವಣೆ ಅಗತ್ಯ'

Rashmi Kasaragodu
Updated On : 13 Mar 2014, 12:05 pm

ಸೇಡಂ: ಮಹಿಳೆಯರಲ್ಲಿ ಸ್ಫೂರ್ತಿದಾಯಕ ಬದಲಾವಣೆ ಅಗತ್ಯ. ಇದರಿಂದ ಅವರು ಸಬಲ ಹಾಗೂ ಪ್ರಬಲರಾಗಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ರವೀಂದ್ರ ಎಲ್. ಹೊನೋಲೆ ಹೇಳಿದರು.
ಪಟ್ಟಣದ ನೃಪತುಂಗ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ನೃಪತುಂಗ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಧ್ಯಾಪಕಿ ಪ್ರೊ. ಶೋಭಾದೇವಿ ಚಕ್ಕಿ ಮಾತನಾಡಿದರು. ಪ್ರಾಚಾರ್ಯ ಮನ್ನೆ ಹಾಶರೆಡ್ಡಿ,  ವಕೀಲರ ಸಂಘದ ಕಾರ್ಯದರ್ಶಿ ಪ್ರವೀಣಕುಮಾರ ಚವಾಣ, ಹಿರಿಯ ವಕೀಲ ನಾರಾಯಣರೆಡ್ಡಿ ವೇದಿಕೆಯಲ್ಲಿದ್ದರು. ಡಾ. ವಾಸುದೇವ ಅಗ್ನಿಹೋತ್ರಿ ಪ್ರಾಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement