ಸಿಂಧನೂರು: 77 ವಿದ್ಯಾರ್ಥಿಗಳು ಗೈರು
ಸಿಂಧನೂರು: ನಗರದಲ್ಲಿ ವಿವಿಧ ಕಾಲೇಜುಗಳಲ್ಲಿ ಬುಧವಾರ ನಡೆದ ರಾಜ್ಯಶಾಸ್ತ್ರ ವಿಷಯದ 1105 ವಿದ್ಯಾರ್ಥಿಗಳು ಪೈಕಿ 1028 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿದರೆ, 77 ವಿದ್ಯಾರ್ಥಿಗಳು ಗೈರಾದರು. ಸಂಕೇತ್, ಆರ್ಜಿಎಂ, ಬಾಲಕರ ಸರ್ಕಾರಿ ಪ.ಪೂ.ಕಾಲೇಜ್, ದುದ್ದುಪುಡಿ, ಕನಕದಾಸ, ಶಂಕರ್ ಟ್ರಸ್ ಕಾಲೇಜಿನ ಕೇಂದ್ರಗಳಲ್ಲಿ ಪರೀಕ್ಷೆ ನಡೆದವು. ಸಂಖ್ಯಾಶಾಸ್ತ್ರ ವಿಷಯದಲ್ಲಿ 72 ವಿದ್ಯಾರ್ಥಿಗಳ ಪೈಕಿ 71 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಓರ್ವ ವಿದ್ಯಾರ್ಥಿ ಗೈರು ಹಾಜರಿಯಾಗಿದ್ದಾನೆ. ಈ ವರ್ಷ ತಾಲೂಕಿನಲ್ಲಿ ಒಟ್ಟು 3049 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ನಡೆಯದಂತೆ ನೋಡಿಕೊಳ್ಳಲು ರಾಯಚೂರಿನಿಂದ ವಿಶೇಷ ತನಿಖಾ ತಂಡ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿತು. ಪ್ರತಿ ಕೇಂದ್ರಕ್ಕೆ 3- 4 ಜನರ ವಿಶೇಷ ಜಾಗೃತದಳ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.