ಕಾನೂನು ಜ್ಞಾನ ಹೊಂದಲು ಕರೆ
ಸಿಂಧನೂರು: ಪ್ರತಿಯೊಬ್ಬರು ಸಾಮಾನ್ಯ ಕಾನೂನು ಜ್ಞಾನ ಹೊಂದಲು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ಎಸ್.ರಾಯಣ್ಣವರ್ ಕರೆ ನೀಡಿದರು.
ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಸಮರ್ಪಣಾ ಅಭಿವೃದ್ಧಿ ಸಂಸ್ಥೆ, ಇನೊವಾ ಫೌಂಡೇಶನ್ ಹಾಗೂ ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಲಯದಲ್ಲಿ ಕಾನೂನು ಕ್ಲಿನಿಕ್ ಆರಂಭಗೊಂಡಿದೆ. ಉಚಿತ ಕಾನೂನು ನೆರವು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಭೀಮನಗೌಡ, ಸರ್ಕಾರಿ ವಕೀಲ ಶೇಖರಪ್ಪ ಶಾಲಿಗನೂರು, ಹಿರಿಯ ನ್ಯಾಯವಾದಿಗಳಾದ ಕೊಟೇಶ್ವರರಾವ್.ಎನ್, ಎಸ್ಡಿಒ ಅಧ್ಯಕ್ಷ ಚಂದ್ರಪ್ಪ ಪಾಟೀಲ್, ಕಾರ್ಯದರ್ಶಿ ಖಾಜಿಮಲಿಕ್ ವಕೀಲ, ವಕೀಲರಾದ ವಿಜಪ್ಪ, ಶೇಖರಪ್ಪ ಧುಮುತಿ, ಬಸವರಾಜ, ಶಿವಪುತ್ರಪ್ಪ ಉಪಸ್ಥಿತರಿದ್ದರು. ಶಿವಮ್ಮ ಸಂಗಡಿಗರು ಪ್ರಾರ್ಥಿಸಿದರು. ಬಸವರಾಜ ಕುಂಬಾರ ನಿರೂಪಿಸಿದರು.