ಕುರುಬ ನೌಕರರ ಸಂಘಕ್ಕೆ ನೇಮಕ
ರಾಯಚೂರು: ಜಿಲ್ಲಾ ಕುರುಬ ನೌಕರರ ಸಂಘದ ಅಧ್ಯಕ್ಷರಾಗಿ ರಾಜಶೇಖರ್ ದಿನ್ನಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗುರುಲಿಂಗಪ್ಪ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಜಿಲ್ಲಾ ಕುರುಬ ನೌಕರರ ಸಂಘದ ಸಭೆಯು ಇತ್ತೀಚೆಗೆ ಮಾನವಿಯ ಕನಕದಾಸರ ಪ್ರಸಾದ ನಿಲಯದಲ್ಲಿ ನಡೆದು ಮುಖಂಡ ಹಂಪಣ್ಣ ಚಂಡೂರು ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ತಾಲೂಕು ಸಂಘಗಳನ್ನು ಬಲಪಡಿಸುವುದು, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಮಹಾದೇವಪ್ಪ ಮಿರ್ಜಾಪೂರ, ಮಾನವಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಪ್ರಮುಖರಾದ ಶ್ರೀಶೈಲಗೌಡ, ಬಸವರಾಜ ಸಿಂಧನೂರು, ಹಂಪಮ್ಮ ಮಾನವಿ, ಶಿವಾನಂದ ನರಹಟ್ಟಿ ಲಿಂಗಸ್ಗೂರು, ಶರಣಪ್ಪ ದೇವದುರ್ಗ ಸೇರಿದಂತೆ ಅನೇಕರಿದ್ದರು.