ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚುನಾವಣೆ ಕರ್ತವ್ಯ ಕಟ್ಟುನಿಟ್ಟಾಗಿ ನಿರ್ವಹಿಸಲು ಎಸಿ ಯೋಗೇಶ್ ಸೂಚನೆ

Rashmi Kasaragodu
Updated On : 14 Mar 2014, 11:58 am

ಲಿಂಗಸ್ಗೂರು: ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಜವಾಬ್ದಾರಿ ಅರಿತು ಕಟ್ಟುನಿಟ್ಟಾಗಿ ನಿರ್ವಹಿಸಲು ಸಹಾಯಕ ಆಯುಕ್ತ ಟಿ. ಯೋಗೇಶ್ ಸೂಚನೆ ನೀಡಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಲಿಂಗಸ್ಗೂರು ವಿಧಾನಸಭೆ ವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ರಜೆ ಪಡೆಯಕೂಡದು ಹಾಗೂ ತಮ್ಮ ಮೊಬೈಲ್ ಬಂದ್ ಮಾಡಕೂಡದು. ಲಿಂಗಸ್ಗೂರು ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 237 ಮತಗಟ್ಟೆಗಳಿದ್ದು, 16-18 ಹಳ್ಳಿಗಳನ್ನೊಳಗೊಂಡು ಒಂದು ಸೆಕ್ಟರ್ ರಚಿಸಲಾಗಿದೆ. ಒಟ್ಟು 16 ಸೆಕ್ಟರ್‌ಗಳ ಪೈಕಿ 16 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ತಂಡ ರಚನೆ: ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಸಿಪಿಐ ಹಾಗೂ ಲಿಂಗಸ್ಗೂರು ಪುರಸಭೆ ಮತ್ತು ಮುದಗಲ್ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ಸೇರಿದಂತೆ ಎಂಸಿಸಿ ತಂಡ ರಚಿಸಲಾಗಿದೆ. ಲಿಂಗಸ್ಗೂರು, ಮುದಗಲ್, ಗುರುಗುಂಟಾ ಹೋಬಳಿಗಳಿಗೆ 3 ಸಂಚಾರಿ ಜಾಗೃತ ದಳ ರಚಿಸಲಾಗಿದೆ. ಇದರಲ್ಲಿ ಒಪ್ಪ ಪ್ರಥಮ ದರ್ಜೆ ಅಧಿಕಾರಿ, ಎಎಸ್‌ಐ, 3 ಜನ ಪೊಲೀಸ್ ಪೇದೆ ಹಾಗೂ ವೀಡಿಯೋ ಗ್ರಾಫರ್ ಇರುತ್ತಾರೆ. ತಾಲೂಕಿನ ಗಡಿ ಗ್ರಾಮಗಳಾದ ರೋಡಲ ಬಂಡಾ(ಯುಕೆಪಿ), ಬೆಳ್ಳಿಹಾಳ, ಛತ್ತರ ಗ್ರಾಮಗಳಲ್ಲಿ 3 ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತದೆ. ವೀಡಿಯೋ ಸರ್ವಲೆನ್ಸ್ ತಂಡ ರಚಿಸಲಾಗಿದ್ದು, ತಂಡಗಳಲ್ಲಿ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಬೇಕು. ಕೇಂದ್ರ ಸ್ಥಳ ಬಿಟ್ಟು ತೆರಳಬಾರದು. ನೀತಿ ಸಂಹಿತೆ ನಿಯಂತ್ರಣ ಕೇಂದ್ರ (08537-258248) ತೆರೆಯಲಾಗಿದ್ದು, ದಿನದ 24 ಗಂಟೆ ತೆರೆಯಲಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆಯಾದ ಕುರಿತು ಸಾರ್ವಜನಿಕರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಮತದಾರರ ವಿವರ: ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದಲ್ಲಿ 1,00,449 ಪುರುಷರು, 1,03962 ಮಹಿಳೆಯರು, ಇತರೆ 8 ಸೇರಿದಂತೆ ಒಟ್ಟು 2,04,419 ಮತದಾರರಿದ್ದಾರೆ. ಒಟ್ಟು 237 ಮತಗಟ್ಟೆಗಳಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 84,465 ಪುರುಷರು, 84,097 ಮಹಿಳೆಯರು, ಇತರೆ 12 ಸೇರಿ ಒಟ್ಟು 1,68,574 ಮತದಾರರಿದ್ದಾರೆ. 204 ಮತಗಟ್ಟೆಗಳಿವೆ ಎಂದರು.
ಸೌಲಭ್ಯ ಕೇಂದ್ರ: ತಹಸೀಲ್ದಾರ್ ಕಚೇರಿ ಅಥವಾ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಹೆಸರು ಸೇರ್ಪಡೆ ಹಾಗೂ ಇನ್ನಿತರ ಯಾವುದೇ ಮಾಹಿತಿ ಪಡೆಯಲು ತಹಸೀಲ್ದಾರ್ ಕಚೇರಿ ಹತ್ತಿರದ ಚುನಾವಣಾ ಕಚೇರಿಯಲ್ಲಿನ ಮತದಾರರ ಸೌಲಭ್ಯ ಕೇಂದ್ರಕ್ಕೆ ಸಂಪರ್ಕಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement