ನಾಳೆ ಬೆಂಗಳೂರಲ್ಲಿ ರಾಜಕೀಯ ಸಂಘರ್ಷ ರ್ಯಾಲಿ
ರಾಯಚೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರಿನಲ್ಲಿ ಮಾ. 15ರಂದು ರಾಜಕೀಯ ಸಂಘರ್ಷ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಮತ್ತಿರರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾನ್ಶೀರಾಂ ಅವರ ಜನ್ಮದಿನದ ಅಂಗವಾಗಿ ಸಮಿತಿಯಿಂದ ಆಯೋಜಿಸಿರುವ ದಲಿತರ ನಡೆ ಸ್ವತಂತ್ರ ರಾಜಕೀಯದೆಡೆಗೆ ಎಂಬ ಘೋಷಣೆಯ ರ್ಯಾಲಿಯು ಬೆಂಗಳೂರಿನ ಚಿಕ್ಕಲಾಲ್ ಬಾಗ್ನಿಂದ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಅದೇ ದಿನ ಮಧ್ಯಾಹ್ನ 2 ಗಂಟೆ ವೇಳೆಗೆ ಫ್ರೀಡಂ ಪಾರ್ಕಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸುವರು ಎಂದು ತಿಳಿಸಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ 2 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.