ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೆಳೆ ಹಾನಿ ಅರ್ಜಿ ಸಲ್ಲಿಕೆಗಾಗಿ ಪರದಾಟ

Rashmi Kasaragodu
Updated On : 14 Mar 2014, 11:59 am

ಆಳಂದ: ತಾಲೂಕಿನ ಖಜೂರಿ, ನರೋಣಾ ಮತ್ತು ಮಾದನಹಿಪ್ಪರಗಾ ವಲಯದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದ ಪರಿಣಾಮ ಹಾಳಾದ ಬೆಳೆಗೆ ಸರ್ಕಾರದ ಪರಿಹಾರ ದೊರೆಯುವ ಭರವಸೆಯಿಟ್ಟು ರೈತರು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ.
ಹಾನಿ ಕುರಿತು ಅರ್ಜಿ ನಮೂನೆ, ಪಹಣಿ ಪತ್ರಿಕೆ, ಬೆಳೆಹಾನಿ ಫೋಟೋ, ಗ್ರಾಮ ಲೇಖಪಾಲಕ, ಕಂದಾಯ ನಿರೀಕ್ಷಕ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳ ಸಹಿಗಾಗಿ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ನೆಲಕ್ಕೆ ಬಿದ್ದ ಶೇ.90ರಷ್ಟು ಜೋಳದ ತೆನೆಗಳಲ್ಲಿ ಕಾಳು ನಾಟಿಯಾಗಿವೆ. ಜಾನುವಾರುಗಳಿಗೆ ಮೇವು ದೊರೆಯದೆ ಹಾಳಾಗಿ ಹೋದ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ಬಂಗರಗಾ ಗ್ರಾಮದ ಯುವ ರೈತ ಶ್ರೀಶೈಲ ಚಿಚಕೋಟಿ ಹಾನಿಯ ಕುರಿತು ತೋರಿಸಿದರು.
ಒಂದಡೆ ಹಾನಿಯಾದ ಬಗ್ಗೆ ದುಃಖ, ಮತ್ತೊಂದಡೆ ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಪರಿಹಾರ ಎಷ್ಟೆಂಬುದು ನಿಗದಿಯಾಗಿಲ್ಲ. ಆದರೂ ಅರ್ಜಿ ಸಲ್ಲಿಕೆ ಭರದಿಂದ ನಡೆಯುತ್ತಿದೆ. ದಿನದ ಶ್ರಮ ಹಾಗೂ ಹಣ ವ್ಯಯ ಮಾಡುತ್ತಿದ್ದಾರೆ.
ಈ ಕುರಿತು ಸರ್ಕಾರ ಅಥವಾ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಹಾನಿಯಾದ ಕುರಿತು ನೋಂದಾಯಿಸಿಕೊಂಡರೆ ಸಾಕು. ಅರ್ಜಿ ಫೋಟೋ ಮತ್ತು ಪಹಣಿ ಪತ್ರಿಕೆ ಪಡೆಯುವ ಅಗತ್ಯತೆ ಬೀಳದು ಎಂದು ಅನೇಕರು ವಾದಿಸುತ್ತಾರೆ.
ಸಂಬಂಧಿತ ಮೇಲಾಧಿಕಾರಿಗಳು ಗಮನ ಹರಿಸಿ ಹಾನಿಯಾದ ಒಟ್ಟು ಪ್ರದೇಶದಲ್ಲಿ ಬೆಳೆಗಳನ್ನು ದಾಖಲಿಸಿ ಸಂಬಂಧಿತ ರೈತರಿಗೆ ಪರಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement