ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಡಿಯೋ ವೀಕ್ಷಣೆ ಸಮಿತಿ

Rashmi Kasaragodu
Updated On : 14 Mar 2014, 11:58 am

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏ.17ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭೆ ಕ್ಷೇತ್ರವಾರು ವಿಡಿಯೋ ವೀಕ್ಷಣೆ ಸಮಿತಿಗಳನ್ನು ಜಿಲ್ಲಾಧಿಕಾರಿ ನಾಗರಾಜು ನೇಮಿಸಿದ್ದಾರೆ.
ಈ ಸಮಿತಿ ಸದಸ್ಯರು ವಿವಿಧ ವಿಡಿಯೋ ತಂಡಗಳು ಸಲ್ಲಿಸುವ ವಿಡಿಯೋ ಚಿತ್ರೀಕರಣವನ್ನು ಆಯಾ ದಿನವೇ ವೀಕ್ಷಿಸಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿ ಮತ್ತು ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ವಿಷಯಗಳನ್ನು ಗಮನಿಸಿ ಚುನಾವಣಾ ಲೆಕ್ಕಪತ್ರ ತಂಡಕ್ಕೆ ಹಾಗೂ ಸಹಾಯಕ ಲೆಕ್ಕ ವೀಕ್ಷಕರಿಗೆ ಮತ್ತು ನೀತಿ ಸಂಹಿತೆಗೆ ಸಂಬಂಧಿಸಿದ ವಿಷಯಗಳನ್ನು ಚುನಾವಣಾ ವೀಕ್ಷಕರಿಗೆ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement