120 ಬಾಲಕಿಯರಿಗೆ ಕರಾಟೆ ತರಬೇತಿ ನೀಡಿದ ಯಶೋದಾ
ಗುಲ್ಬರ್ಗ: ಜೇವರ್ಗಿ ಕಾಲೋನಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಇಲ್ಲಿನ ಮಹಿಳಾ ಪೇದೆ ಯಶೋಧಾ ಕಟಕೆ ವಾರಕ್ಕೂ ಹೆಚ್ಚು ಕಾಲ ಕರಾಟೆ ತರಬೇತಿ ನೀಡಿದ್ದಾರೆ.
ಎಂ.ಬಿ. ನಗರ ಪೊಲೀಸ್ ಠಾಣೆಯ ಪೇದೆ ಯಶೋಧಾಗೆ ಬಾಲಕಿಯರಿಗೆ ಕರಾಟೆ ತರಬೇತಿ ನೀಡಿದ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆಯಡಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿರುವ 120 ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆಗಾಗಿ 7 ದಿನಗಳವರೆಗೆ ಎಂಬಿ ಪೊಲೀಸ್ ಠಾಣೆಯ ಆದೇಶದಂತೆ ಪೇದೆ ಯಶೋಧಾರವರು ಕರಾಟೆ ತರಬೇತಿ ನೀಡಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿರುವುದರಿಂದ ಪೊಲೀಸ್ ಇಲಾಖೆಗೂ ಹಾಗೂ ಪಿಎಸ್ಐ ಯಶೋಧಾರವರಿಗೂ ಶಿಬಿರವು ಕೃಜ್ಞತೆ ಸಲ್ಲಿಸುತ್ತದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.