ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಠಿಣ ಪರಿಶ್ರಮದಿಂದ ಉತ್ತಮ ಫಲ

Rashmi Kasaragodu
Updated On : 15 Mar 2014, 11:47 am

ಚಿತ್ತಾಪುರ: ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಓದಿನ ಕಡೆಗೆ ನೀಡದೇ ಅಲಕ್ಷ್ಯ ಮಾಡಿದಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಓದಿಗೆ ಮಹತ್ವ ನೀಡಿ ಕಠಿಣ ಪ್ರರಿಶ್ರಮದಿಂದ ಅಭ್ಯಾಸ ಮಾಡಿ ಫಲ ಪಡೆಯಬೇಕೆಂದು ಉಪನ್ಯಾಸಕ ನರಸಪ್ಪ ಚಿನ್ನಾಕಟ್ಟಿ ಹೇಳಿದರು.
ಅವರು ಇಲ್ಲಿನ ಕೋರಿಸಿದ್ದೇಶ್ವರ ಪ.ಪೂ. ಕಾಲೇಜು ಹಾಗೂ ಭಾಗಮ್ಮ ಪದವಿ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಕಾಲೇಜು ಜೀವನ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟ. ಇಲ್ಲಿ ಎಡವಿದಲ್ಲಿ ಅವರಿಗೆ ಮುಂದೆ ಅಪಾಯ ತಪ್ಪಿದ್ದಲ್ಲ. ಮುಂದಿನ ಪ್ರವೇಶ ಪರೀಕ್ಷೆಗಳಿಗೆ ಸಿದ್ದರಾಗಲು ಏಕಾಗ್ರತೆಯಿಂದ ಓದಿ ಹೆಚ್ಚಿನ ಅಂಕ ಪಡೆಯಲು ಶ್ರಮಿಸಿ ಎಂದು ಕರೆ ನೀಡಿದರು.
ಉಪನ್ಯಾಸಕ ಮಸ್ತಾನ ಪಟೇಲ್ ಅಣವಾರ, ಹಿಂದಿ ವಿಷಯದಲ್ಲಿ ಅತೀಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 1 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ, ಹಾಗೂ ಉಪನ್ಯಾಸಕ ಕಾಶಿನಾಥ ಕರದಾಳರವರು ಎಂ.ಎ ವ್ಯಾಸಂಗದ ವೆಚ್ಚವನ್ನು ಭರಿಸುವುದಾಗಿ ಹೇಳಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವಂತೆ ಪ್ರೋತ್ಸಾಹಿಸಿದರು.
ಪ್ರಾಚಾರ್ಯ ಡೇವಿಡ್ ಅಧ್ಯಕ್ಷತೆ ವಹಿಸಿದ್ದರು.
 ಉಪನ್ಯಾಸಕ ಶ್ರೀಧರ ಇನಾಂದಾರ, ತಮ್ಮಣ್ಣ ಹೋನಗೇರಿ, ಶರಣಪ್ಪ ಹಲಕರ್ಟಿ, ಸುನಿತಾ ಬುಳ್ಳಾ, ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement