ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ದೇವದುರ್ಗ: ತಾಲೂಕಿನ ಗಲಗ ಗ್ರಾಮದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮಾತನಾಡಿದ ಆರ್ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ನಾಯಕ್, ಕಳೆದ ಐದು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ಮಾಡುವಲ್ಲಿಯೇ ಕಾಲಹರಣ ಮಾಡಿದ್ದು, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಸಂಪತ್ತು ಕೊಳ್ಳೆ ಹೊಡೆಯಲಾಗಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಮತದಾರರಿಗೆ ವಂಚಿಸಿದವರನ್ನು ಈಗಾಗಲೇ ಮತದಾರರು ಸೋಲಿಸಿದ್ದಾರೆಂದ ಅವರು, ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ಈ ಸಂದರ್ಭ ಗಲಗ ಗ್ರಾಮದ ತಾಯಮ್ಮ ಕಮಿಟಿ ಅಧ್ಯಕ್ಷ ರಾಜಾ ಯಂಕೋಬ ದೊರೆ ನೇತೃತ್ವದಲ್ಲಿ ಸರ್ವ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಎಸ್.ಎನ್. ಕುಮಾರ ಚಟ್ನಳ್ಳಿ, ನಿಂಗಪ್ಪ ಪೂಜಾರಿ, ಗುಂಡಪ್ಪ ಕುಂಬಾರ, ಕೆ.ಪಾಷಾ, ಶಂಕ್ರಪ್ಪ ದೇವರಮನಿ, ಪ್ರಕಾಶ ಪದ್ಮಸಾಲೆ, ಬಸವರಾಜ ಹೊಟೇಲ್, ಗಂಗಾಧರ ಕುಂಬಾರ, ಚನ್ನಯ್ಯ ಮಾಸ್ತರ, ತಿಮ್ಮಣ್ಣ ಉಪ್ಪಾರ ಸೇರಿದಂತೆ ಮತ್ತಿತರರು ಕಾಂಗ್ರೆಸ್ ಸೇರಿದರು.