ಎನ್ನೆಸ್ಸೆಸ್ ಶಿಬಿರ, ವಿಶೇಷ ಉಪನ್ಯಾಸ
ದೇವದುರ್ಗ: ಪಟ್ಟಣದ ಶರಣಪ್ಪ ಮುರಿಗೆಪ್ಪ ಖೇಣೆದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಇತ್ತೀಚೆಗೆ ವಿಶೇಷ ಶಿಬಿರದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಚ್ಐವಿ (ಏಡ್ಸ್) ಕುರಿತು ಮಾತನಾಡಿದ ಉಪನ್ಯಾಸಕ ರೋಶನ್ ಶರ್ಮಾ, ಎಚ್ಐವಿ ಏಡ್ಸ್ ಹರಡುವಿಕೆ ತಡೆಗೆ ಎಲ್ಲರೂ ಸುರಕ್ಷಿತ ಲೈಂಗಿಕತೆ ಕ್ರಮ ಅನುಸರಿಸಬೇಕು. ಆರೋಗ್ಯವಂತ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ನಂದಕುಮಾರ ರೋಗದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿ, ಯುವಕರು ಸಮಾಜದಲ್ಲಿ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನಹರಿಸುವಂತೆ ಮನವಿ ಮಾಡಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಹಾಗೂ ಉಪನ್ಯಾಸಕ ಮಲ್ಲಯ್ಯ ಬಲ್ಲಿದವ್, ಡಾ. ಸುಮಂಗಲಾ, ಖಾಜಾಸಾಬ, ಡಾ. ಅನಂತ್ ಮಾತನಾಡಿದರು. ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.