ವೈಚಾರಿಕತೆ ಇರಲಿ
ಸಿಂಧನೂರು: ಶೂದ್ರರು ಮತ್ತು ಮಹಿಳೆಯರಿಗೆ ದೇವರು ಮತ್ತು ಧರ್ಮದ ಭ್ರಾಂತಿ ತುಂಬಿ ಶೋಷಣೆ ಮಾಡುತ್ತಿದ್ದ ವ್ಯವಸ್ಥೆ ವಿರುದ್ಧ ಆಂದೋಲನವನ್ನು ಕಟ್ಟಿದ ಬಸವಣ್ಣನ ವೈಚಾರಿಕತೆಯನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆಂತರಿಕ ಗುಣಮಟ್ಟದ ಭರವಸೆ ಕೋಶ ಉಪನ್ಯಾಸಕರಾಗಿ ಅವರು ಮಾತನಾಡಿದರು. ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಒರಿಸ್ಸಾದ ಪೂರಿ ಜಗನ್ನಾಥ ದೇವಾಲಯ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಶುದ್ಧೀಕರಣಕ್ಕೆ ಅನೇಕ ಸಂಘಟನೆಗಳವರು ಹೋರಾಟ ನಡೆಸಿದರು ಎಂದು ವಿಷಾದಿಸಿದರು.
ಇಷ್ಟಲಿಂಗ ನಿರಂತರ ಪೂಜೆಗೆ ಬಸವಣ್ಣ ಹೇಳಿಲ್ಲ: ಇಷ್ಟಲಿಂಗವನ್ನು ಬವಸಣ್ಣ ಸಾಂಕೇತಿಕವಾಗಿ ಬಳಸಿದರೇ ಹೊರತು ಅದನ್ನೇ ನಿರಂತರವಾಗಿ ಪೂಜೆ ಮಾಡುತ್ತಾ ಕೂಡಲು ಹೇಳಲಿಲ್ಲ. ಪ್ರಮುಖವಾಗಿ ಕಾಯಕಕ್ಕೆ ಮಹತ್ವ ಕೊಟ್ಟಿದ್ದಾರೆಂದು ವಿವರಿಸಿದರು.
ಪ್ರಾಚಾರ್ಯ ಪ್ರಹ್ಲಾದರಡ್ಡಿ, ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ಪಂಪನಗೌಡ ಗುರಿಕಾರ ಮತ್ತಿತರರಿದ್ದರು.