23ರಂದು ಯೋಗ ಮಹೋತ್ಸವ
ಸಿಂಧನೂರು: ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಯೋಗ ಹಾಗೂ ಪ್ರಾಣಾಯಾಮ ಒಳ್ಳೆಯ ಮಾರ್ಗವಾಗಿದ್ದು, ಮಾ.23ರಂದು ಯೋಗಋಷಿ ಬಾಬಾ ರಾಮದೇವ್ ನೇತೃತ್ವದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಲಕ್ಷ ಜನರೊಂದಿಗೆ ಯೋಗ ಮಹೋತ್ಸವವನ್ನು ಆಚರಿಸುವರು ಎಂದು ಯುವ ಭಾರತದ ರಾಜ್ಯ ಪ್ರಭಾರಿ ಎಂ.ಭಾಸ್ಕರ್ ಹೇಳಿದರು. ನಗರದ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಯೋಗ ಮಹೋತ್ಸವ ನಿಮಿತ್ತ ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೊಂದು ಗಿನ್ನಿಸ್ ದಾಖಲೆಯಾಗುವ ಸಂದರ್ಭ. ಮುಖ್ಯ ಅತಿಥಿ ಅಮರೇಶಪ್ಪ ಮೈಲಾರ, ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಯೋಗದ ಮಹತ್ವ ಕುರಿತು, ಸರಸ್ವತಿ ಪಾಟೀಲ, ಡಾ. ಎಸ್.ವಿ.ಪಾಟೀಲ್, ಶ್ರೀಶೈಲ್ ಪತ್ತಾರ, ಯೋಗ ಸಮಾವೇಶ ಹಾಗೂ ಹೋಳಿ ಹಬ್ಬದ ಕುರಿತು ಮಾತನಾಡಿದರು. ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀರೇಂದ್ರ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಸುಮಂಗಲಾ ಮಲ್ಲಿಕಾರ್ಜುನ, ಮಮತಾ ಹಿರೇಮಠ, ಧನಲಕ್ಮಿ, ಎಸ್.ಎನ್.ಮೂರ್ತಿ, ಶಂಕರ ಶೆಟ್ಟಿ, ವನಿತಾ ಶೆಟ್ಟಿ ಇದ್ದರು. ಶಿಕ್ಷಕ ಟಿ.ಬಿ. ಬಡಿಗೇರ ಸ್ವಾಗತಿಸಿ, ಬೀರಪ್ಪ ಶಂಭೋಜಿ ನಿರೂಪಿಸಿ, ಮಲ್ಲಿಕಾರ್ಜುನ ವಂದಿಸಿದರು.
ಸೇಂದಿ ಮಾರಾಟ: ಮಹಿಳೆ ಬಂಧನ
ರಾಯಚೂರು:ಇಲ್ಲಿನ ಜಲಾಲ್ ನಗರದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಕಸ್ತೂರಿ ಎಂದು ಗುರುತಿಸಲಾಗಿದೆ. ಈಕೆ ತನ್ನ ಮನೆ ಮುಂದೆ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ 1 ಪ್ಲಾಸ್ಟಿಕ್ ಕೊಡದಲ್ಲಿನ 10 ಲೀ. ಸೇಂದಿ ಹಾಗೂ 50 ರು. ನಗದು ಜಪ್ತಿ ಮಾಡಿದ್ದಾರೆ. ಈ ಕುರಿತು ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.