ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂದಾಜು ಪತ್ರಿಕೆಯಂತೆ ರಸ್ತೆ ಕಾಮಗಾರಿ ಕೈಗೊಳ್ಳಲು ಮನವಿ

Rashmi Kasaragodu
Updated On : 21 Mar 2014, 12:51 pm

ಲಿಂಗಸ್ಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ವಾರ್ಡ ಸಂ. 5ರಲ್ಲಿ ಅಂದಾಜು ಪತ್ರಿಕೆಯಂತೆ ರಸ್ತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿ ಸಹಾಯಕ ಆಯುಕ್ತ ಟಿ. ಯೋಗೇಶ್‌ರಿಗೆ ನಾಗರಿಕರು ಮನವಿ ಮಾಡಿದರು. ಪಟ್ಟಣದ ವಾರ್ಡ್ ಸಂ. 5ರಲ್ಲಿ ರಸ್ತೆ ಅತಿಕ್ರಮಣಗೊಂಡಿದ್ದು, ಸದರಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ದಾಖಲೆ ಪ್ರಕಾರ 30ಅಡಿ ಅಗಲ ರಸ್ತೆ ನಿರ್ಮಿಸಬೇಕು. ಆದರೆ ಕೇವಲ 15 ಅಡಿ ರಸ್ತೆ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆ ಕಿರಿದಾಗಿ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಬೇಕಿದೆ. ಕೂಡಲೇ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮ ತೆರವು ಕಾರ್ಯಗೊಳಿಸಿ ಅಂದಾಜು ಪತ್ರಿಕೆಯಂತೆ 30 ಅಡಿ ರಸ್ತೆ ನಿರ್ಮಿಸಲು ಸೂಚಿಸಬೇಕೆಂದು ಒತ್ತಾಯಿಸಿದರು.


ಮೂರ್ತಿ ಪ್ರತಿಷ್ಠಾಪನೆ, ಪಂಚ ಕಳಸಾರೋಹಣ
ಸಿಂಧನೂರು: ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಮಲ್ಲಿಕಾರ್ಜುನ ಹಾಗೂ ನಂದೀಶ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪಂಚ ಕಳಸಾರೋಹಣ ಕಾರ್ಯಕ್ರಮ ಮಾ. 31ರಂದು ಜರುಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಾ. 26ರಂದು ಕಳಸದ ಕಟ್ಟೆಯಿಂದ ಮೂರ್ತಿಗಳನ್ನು ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಕಳಸ, ಬಾಜಾ-ಭಜಂತ್ರಿ, ಡೊಳ್ಳು, ವಾದ್ಯ, ವೈಭವಗಳೊಂದಿಗೆ ಮೆರವಣಿಗೆಯಲ್ಲಿ ತರಲಾಗುವುದು. ಮಾ. 30ರಂದು ಶ್ರೀಧರ ಶಾಸ್ತ್ರಿ, ಗುರುದೇವ ಶಾಸ್ತ್ರಿ ಅವರಿಂದ ಹೋಮ -ಹವನ ಹಾಗೂ ನವಗ್ರಹ ಪೂಜಾ ಕಾರ್ಯಕ್ರಮಗಳು ಜರುಗುವುವು.  ರೌಡಕುಂದದ ಸಂಸ್ಥಾನ ಹಿರೇಮಠದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಅಂಕಲಿಮಠದ ವೀರಭದ್ರ ಸ್ವಾಮಿ, ರಂಗಾಪುರ ಅಮರಯ್ಯ ತಾತ, ಹುನುಕುಂಟಿಯ ರೇವಣಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಕ್ಯಾತನಹಟ್ಟಿಯ ಆದಯ್ಯ ಪೂಜಾರಿ ಸಾನ್ನಿಧ್ಯ ವಹಿಸುವರು. ಶಾಸಕ ಪ್ರತಾಪಗೌಡ ಪಾಟೀಲ್, ಗ್ರಾಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸುವರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement