ಏಪ್ರಿಲ್ 2ರಂದು ಮಹಾಪೌರ, ಉಪ ಮಹಾಪೌರರ ಚುನಾವಣೆ
ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆಯ ಮಹಾಪೌರರ, ಉಪಮಹಾಪೌರರ ಹಾಗೂ ಸ್ಥಾಯಿ ಸಮಿತಿಗಳ ಸದಸ್ಯರ 16ನೇ ಅವಧಿಗೆ ಚುನಾವಣೆಯನ್ನು ಏಪ್ರಿಲ್ 2ರಂದು ಸಾಯಂಕಾಲ 5 ಗಂಟೆಗೆ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯ ಹಳೆಯ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆ ಪ್ರಕಾರ- ಗುಲ್ಬರ್ಗ ಮಹಾನಗರ ಪಾಲಿಕೆ ಮಹಾಪೌರರ ಸ್ಥಾನ ಹಿಂದುಳಿದ ವರ್ಗ-ಅ(ಮಹಿಳೆ), ಉಪಮಹಾಪೌರರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಈ ಚುನಾವಣೆಗಾಗಿ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನು ನಾಮಪತ್ರಗಳನ್ನು ಸ್ವೀಕರಿಸಲು ಅಧಿಕೃತ ಅಧಿಕಾರಿಯೆಂದು ನಿಯುಕ್ತಿಗೊಳಿಸಲಾಗಿದೆ. ಸದಸ್ಯರು ತಮ್ಮ ನಾಮಪತ್ರಗಳನ್ನು ಏ.12ರಂದು ಮಧ್ಯಾಹ್ನ 1.30 ಗಂಟೆಯೊಳಗೆ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಲು ಕೋರಲಾಗಿದೆ.