ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭಗವಂತನ ಆರಾಧನೆಗೆ ಭಕ್ತಿ ಮುಖ್ಯ: ನಾರಾಯಣಾಚಾರ್ಯ

Mainashree
Updated On : 29 Mar 2014, 10:52 am

ಸಿಂಧನೂರು: ಭಗವಂತನ ಆರಾಧನೆಗೆ ಡಾಂಭಿಕ ಮಡಿ ಮೈಲಿಗೆಗಳಿಗಿಂತ ಶ್ರದ್ಧೆಯ ಭಕ್ತಿ ಮುಖ್ಯ ಎಂದು ಖ್ಯಾತ ವಾಗ್ಮಿಗಳಾದ ನಾರಾಯಣಾಚಾರ್ಯ ಧೂಳಿಖೇಡ ಹೇಳಿದರು.
ಅವರು ಅನಂತ ಪದ್ಮನಾಭ ಜ್ಞಾನ ಪ್ರಸಾರ ಸಮಿತಿಯಿಂದ 15 ಮಾಸಗಳ ಉಪನ್ಯಾಸ ಮಾಲಿಕೆಯ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅನಂತ ಪದ್ಮನಾಭನ ಹೆಸರಿನಲ್ಲಿ ಕಳೆದ ವರ್ಷ ಜ.19ರಿಂದ ನಿರಂತರವಾಗಿ 15 ತಿಂಗಳವರೆಗೆ ವಿವಿಧ ಪಂಡಿತರನ್ನು ಆಹ್ವಾನಿಸಿ ವಿವಿಧ ಧಾರ್ಮಿಕ ವಿಷಯಗಳ ಕುರಿತು ಉಪನ್ಯಾಸ ನಡೆಸಿರುವುದು ಶ್ಲಾಘನೀಯವಾಗಿದೆ. ಕಿರಿಯ ವಯಸ್ಸಿನ ಶಂಕರನಾರಾಯಣಾಚಾರ್ಯ ಆಲಂಪಲ್ಲಿ ಒಬ್ಬ ಉತ್ತಮ ಸಂಘಟಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅವರ ಹಿಂದೆ ಬ್ರಾಹ್ಮಣ ಸಮಾಜದ ಸಕಲರು ಕೈ ಜೋಡಿಸಿದ್ದಾರೆ. ಅವರ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
  ಮಂತ್ರಾಲಯದ ಪಂಡಿತ ದ್ವಾರಕಾನಾಥಾಚಾರ್ಯ ಮಾತನಾಡಿ, ಶಂಕರನಾರಾಯಣಾಚಾರ್ಯ ಅವರ ಶ್ರಮಕ್ಕೆ ಸಕಲರ ಆಶೀರ್ವಾದವಿದೆ. ಅವರ ಮುಂದಿನ ಕಾರ್ಯಕ್ರಮದ ಶುಭಾರಂಭಕ್ಕೆ ಮಂತ್ರಾಲಯದ ಸುಭುದೇಂದ್ರ ಶ್ರೀಪಾದಂಗಳವರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು. ಧಾರ್ಮಿಕ ಕೈಂಕರ್ಯಗಳು ನಿರಂತರವಾಗಿ ನಡೆಯುವ ಮೂಲಕ ಸಮಾಜವನ್ನು ಗಟ್ಟಿಗೊಳಿಸಲು ಪ್ರಯತ್ನಿಸೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವೆಂಕಟರಾವ ಬಂಡಿವಕೀಲ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ, ಶಂಕರನಾರಾಯಣಾಚಾರ್ಯ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement