ಅಮರೇಶ್ವರ ದರ್ಶನ ಪಡೆದ ಭಕ್ತ ಸಮೂಹ
ಲಿಂಗಸ್ಗೂರು: ಹಿಂದೂಗಳಿಗೆ ಹುಣ್ಣಿಮೆ ಮತ್ತು ಅಮಾವಾಸ್ಯೆ ವಿಶೇಷ ದಿನಗಳು. ಅದರಲ್ಲೂ ಭಾನುವಾರ ಅಮಾವಾಸ್ಯೆ ವಿಶಿಷ್ಟ ಧಾರ್ಮಿಕ ಕಾರ್ಯಗಳಿಗೆ ವಿಶೇಷ ದಿನವಾಗಿರುತ್ತದೆ. ಚಂದ್ರಮಾನ ಯುಗಾದಿ ಹಬ್ಬದ ಹಿಂದಿನ ದಿನ ಅಮಾವಾಸ್ಯೆ ಭಾನುವಾರ ಆಗಮಿಸಿದ ಪ್ರಯುಕ್ತ ತಾಲೂಕಿನ ಜನತೆ ಮಠ- ಮಂದಿರಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾಗುವ ದೃಶ್ಯ ಸಾಮಾನ್ಯವಾಗಿತ್ತು. ಅದೇ ರೀತಿ ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವ ಹೋಳಿ ಹುಣ್ಣಿಮೆ ದಿನದಂದು ವಿಜೃಂಭಣೆಯಿಂದ ಜರುಗಿತು. ಅಂದಿನಿಂದ ಯುಗಾದಿ ಹಬ್ಬದವರೆಗೆ ಜಾತ್ರೆ ಇರುತ್ತದೆ. ಭಾನುವಾರ ಅಮರೇಶ್ವರ ಸುಕ್ಷೇತ್ರದಲ್ಲಿ ಸಾವಿರಾರು ಜನ ಭಕ್ತರು ಹೊಂಡದಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಪುನೀತರಾದರು