ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಟ್ಟೆ ಮಲ್ಲಿಕಾರ್ಜುನ ಜಾತ್ರೆ ಇಂದು

Rashmi Kasaragodu
Updated On : 31 Mar 2014, 1:52 am

ಸಿಂಧನೂರು: ತಾಲೂಕಿನ ತಿಪ್ಪನಹಟ್ಟಿ (ಹುಡೇವು) ಗ್ರಾಮದಲ್ಲಿ ಮಾ. 31ರಂದು ಕಟ್ಟೆ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಹಾಗೂ ಗುಡದೂರು ದೊಡ್ಡಬಸವೇಶ್ವರ ಪುರಾಣ ಮಂಗಲ ಕಾರ್ಯಕ್ರಮ ಜರುಗಲಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ. ಸೋಮವಾರ ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಸಕಲ ವಾದ್ಯಗಳೊಂದಿಗೆ ಕಳಸಾರೋಹಣ ಕಾರ್ಯಕ್ರಮ ಜರುಗುವುದು. ಮಧ್ಯಾಹ್ನ 12 ಗಂಟೆಯಿಂದ ಭೂರಿ ಗಣರಾಧನೆ ಜರುಗುವುದು. ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಹಾಗೂ ಪುರಾಣ ಮಂಗಲ ನೆರವೇರುವುದು. ಸಾನ್ನಿಧ್ಯವನ್ನು ಉಟಕನೂರಿನ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿ, ಸೋಮನಾಥ ಶಿವಾಚಾರ್ಯ, ಶಾಂತಮಲ್ಲ ಶಿವಾಚಾರ್ಯ, ಬೂದಿ ಬಸವೇಶ್ವರ ಮಹಾಸ್ವಾಮಿ, ಸಿದ್ದರಾಮಾನಂದ ಪುರಿ ಮಹಾಸ್ವಾಮಿ, ಮಹಾಲಿಂಗ ಮಹಾಸ್ವಾಮಿ, ಶಿವಾದೇವಾನಂದರು, ಮಲ್ಲಿಕಾರ್ಜುನ ಮಹಾಸ್ವಾಮಿ, ಅಮರೇಶ್ವರ ದೇವರು, ವೀರಭದ್ರೇಶ್ವರ ಮಹಾಸ್ವಾಮಿ, ನೀಲಕಂಠಾರ್ಯ ತಾತನವರು, ದೊಡ್ಡಬಸವಾರ್ಯ ತಾತ, ಶಿವಲಿಂಗಯ್ಯ ತಾತ, ಶಿವಲಿಂಗಯ್ಯ ತಾತ,ಬಸಯ್ಯ ತಾತ, ಶರಣಬಸವ ಸ್ವಾಮಿ ವಹಿಸುವರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement