ಕಾರ್ಯಾಚರಣೆ: ಅಕ್ರಮ ಮದ್ಯ ವಶ
ಸಿಂಧನೂರು: ತಾಲೂಕಿನ ಗುಡಗಲದಿನ್ನಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಮರಪ್ಪನ ಮನೆ ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿ ಮದ್ಯ ವಶಪಡಿಸಿಕೊಂಡಿದ್ದಾರೆ. ಭೇಟಿಯಾದ ಸುದ್ದಿಗಾರರೊದಿಗೆ ಮಾತನಾಡಿದ ಅಬಕಾರಿ ಇಲಾಖೆಯ ಉಪನಿರ್ದೇಶಕ ತಿಪ್ಪಯ್ಯ ರು. 7000 ಮೌಲ್ಯದ 25.380 ಲೀಟರ್ ಮದ್ಯ ಮತ್ತು ನಗರದ ವಾಣಿ ಬಾರ್ ಹತ್ತಿರ ರು. 8100 ಮೌಲ್ಯದ 1100 ಬೀರ್ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಬಕಾರಿ ಇಲಾಖೆ ಉಪನಿರ್ದೇಶಕ ಬಸವರಾಜ ಸಿಬ್ಬಂದಿ ಇದ್ದರು.
ಸೇಂದಿ ಮಾರಾಟ: ಮಹಿಳೆ ಬಂಧನ
ರಾಯಚೂರು ವರದಿ: ನಗರದ ಮಿಲ್ಟನ್ ಶಾಲೆಯ ಬಳಿಯಿರುವ ಮಡ್ಡಿಪೇಟೆಯಲ್ಲಿ ಸೇಂದಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ನರಸಮ್ಮ ಎಂದು ಗುರುತಿಸಲಾಗಿದೆ. ಈಕೆ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆಕೆಯಿಂದ 1ಪ್ಲಾಸ್ಟಿಕ್ ಕೊಡದಲ್ಲಿದ್ದ 10ಲೀ ಸೇಂದಿ ಹಾಗೂ ನಗದು ರು. 50 ಜಪ್ತಿ ಮಾಡಿದ್ದಾರೆ. ಈ ಕುರಿತು ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.