ಭಾರತ ಜ್ಯೋತಿ ಪ್ರಶಸ್ತಿ
ಸಿಂಧನೂರು: ಹೊಸ ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡುವ ಪ್ರಶಸ್ತಿಗೆ ತುರ್ವಿಹಾಳ ಗ್ರಾಮದ ಸಮಾಜ ಸೇವಕ ಆರ್. ಸಿದ್ದಲಿಂಗಪ್ಪ ಭಾಜನರಾಗಿದ್ದಾರೆ. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಆರ್ಥಿಕ ಬೆಳವಣಿಗೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಕುರಿತ ವಿಚಾರ ಸಂಕಿರಣ ಹಾಗೂ ಸಮಾರಂಭದಲ್ಲಿ ಸಮಾಜ ಸೇವೆಯನ್ನು ಪರಿಗಣಿಸಿ ಭಾರತ ಜ್ಯೋತಿ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಮಿಳುನಾಡು ಹಾಗೂ ಅಸ್ಸಾಂನ ನಿವೃತ್ತ ರಾಜ್ಯಪಾಲ ಡಾ. ಭೀಷ್ಮ ನರೇನ್ಸೇನ್, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ರಾಜ್ಯಪಾಲ ಜಿ.ವಿ. ಮಾತೂರ್, ಸಿಬಿಐ ಮಾಜಿ ನಿರ್ದೇಶಕ ಜೋಗಿಂದರ್ ಶರ್ಮಾ, ಫ್ರೆಂಡ್ಶಿಪ್ ಸೊಸೈಟಿ ಅಧ್ಯಕ್ಷ ಸೇರಿದಂತೆ ಗಣ್ಯ ಉಪಸ್ಥಿತರಿದ್ದರು.