ನೀರಮಾನ್ವಿಯಲ್ಲೂ ಕಾರ್ಮಿಕರ ಸಂಭ್ರಮ
ರಾಯಚೂರು: ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಕಟ್ಟಡ ಕಾರ್ಮಿಕರ ಸಂಘದಿಂದ ಗುರುವಾರ ಕಾರ್ಮಿಕರ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಗೋಪಾಲದಾಸ್ ಮಾತನಾಡಿ, ಸರ್ಕಾರ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು. ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು ಎಂದು ಆಗ್ರಹಿಸಿದರು. ರೇಣುಕಾ ವೃತ್ತದಲ್ಲಿನ ಕಟ್ಟಡ ಕಾರ್ಮಿಕ ಸಂಘದ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಕಾರ್ಮಿಕರು ಸಂಭ್ರಮಿಸಿದರು. ಸಂಘದ ಉಪಾಧ್ಯಕ್ಷ ರಮೇಶ, ಬಾಲಪ್ಪ, ವಾಸುದೇವ, ಶಿವು, ಹನುಮಂತ, ರಮೇಶ, ನಾಗಪ್ಪ, ಕನಕಪ್ಪ, ನಾಗರಾಜ, ಬಸವ, ರಾಮ ಸೇರಿ ಅನೇಕರಿದ್ದರು.