ಮಸ್ಕಿ: ಕಟ್ಟಡ ಕಾರ್ಮಿಕರ ಮೆರವಣಿಗೆ
ಮಸ್ಕಿ: ಪಟ್ಟಣದಲ್ಲಿ ಗುರುವಾರ ವಿಶ್ವ ಕಾರ್ಮಿಕ ದಿನಾಚರಣೆ ಸಂದರ್ಭ ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕರ ಸಂಘದಿಂದ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಭ್ರಮಾರಾಂಭಾ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಕನಕ ವೃತ್ತ, ತೇರ ಬಜಾರ್, ಮೇನ್ ಬಜಾರ್, ದೈವದ ಕಟ್ಟೆ, ಅಗಸಿ, ಮುದಗಲ್ ಕ್ರಾಸ್, ಗಾಂಧಿನಗರ, ಹಳೆ ಬಸ್ ನಿಲ್ದಾಣದ ಮೂಲಕ ಭ್ರಮಾರಾಂಬಾ ದೇವಸ್ಥಾನ ತಲುಪಿತು. ಮೆರವಣಿಗೆಯೂದ್ದಕ್ಕೂ ಕಾರ್ಮಿಕರು ಕಾರ್ಮಿಕರ ಪರ ಘೋಷಣೆಗಳನ್ನು ಕೂಗಿದರು. ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸಾರಪ್ಪ ಬಂಗಾಲಿ, ಗ್ರಾಪಂ ಸದಸ್ಯ ಮಲ್ಲಯ್ಯ ಚಾವಣಿ, ಜಿಲ್ಲಾ ಭೋವಿ ಸಮಾಜದ ಯುವ ಘಟಕದ ಅಧ್ಯಕ್ಷ ರವಿಕುಮಾರ ಚಿಗರಿ, ಶೇಖರಪ್ಪ ಬೆಳಗಲ್, ತಿಮ್ಮಣ್ಣ ಗುಡಿಸಲಿ, ಅಂಜನೇಯ್ಯ ಆನೆಹೊಸೂರು, ಕೃಷ್ಣಾ ಚಿಗರಿ, ವೀರೇಶ ಬಡಿಗಿ ಇದ್ದರು.