ಮೊರಾರ್ಜಿ ವಸತಿ ಶಾಲೆ ಪ್ರವೇಶಕ್ಕಾಗಿ ಕೌನ್ಸೆಲಿಂಗ್ 5ರಿಂದ
ರಾಯಚೂರು: 2014-15ನೇ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಏಕಲವ್ಯ ವಸತಿ ಶಾಲೆಗಳಿಗೆ ಪ್ರವೇಶಕ್ಕೆ ಈಗಾಗಲೇ ಪ್ರವೇಶ ಪರೀಕ್ಷೆ ನಡೆಸಿದ್ದು ಫಲಿತಾಂಶ ಪ್ರಕಟಿಸಲಾಗಿದೆ. ಈ್ಡಡಿ-್ಟಜಿಜಿ ಠಜ್ಠ್ಛಜಟಿಡಿಛ್ಜಜ ಪಟ್ಟಿಯಲ್ಲಿ ಆಯ್ಕೆಯಾಗಿರುವವರು ಮೇ 5ರಿಂದ ಮೇ 7ರವರೆಗೆ ನಡೆಯಲಿರುವ ವಿದ್ಯಾರ್ಥಿಗಳ ಮೀಸಲಾತಿವಾರು ಮತ್ತು ಲಿಂಗವಾರು ಕೌನ್ಸೆಲಿಂಗ್ಗೆ ಹಾಜರಾಗಲು ಸೂಚಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪ್ರವರ್ಗ-1 ಬಾಲಕ/ಬಾಲಕಿಯರಿಗೆ ಮೇ 5ರಂದು, ಪರಿಶಿಷ್ಟ ವರ್ಗ, ಪ್ರವರ್ಗ- 2ಎ, 2ಬಿ, 3ಎ ಹಾಗೂ 3 ಬಿ ಬಾಲಕ/ಬಾಲಕಿಯರಿಗೆ ಮೇ 6ರಂದು ಹಾಗೂ ಅಂಗವಿಕಲರು, ವಿಶೇಷ ದುರ್ಬಲ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರ ಬಾಲಕ/ಬಾಲಕಿಯರಿಗೆ ಮೇ 7ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು.
ಈಗಾಗಲೇ ಆಯ್ಕೆಗೊಂಡು ಈ್ಡಡಿ-್ಟಜಿಜಿ ಠಜ್ಠ್ಛಜಟಿಡಿಛ್ಜಜ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ಗೆ ಹಾಜರಾಗಲು ಸೂಚನಾ ಪತ್ರ ಅಂಚೆ ಮೂಲಕ ಕಳುಹಿಸಲಾಗಿದ್ದು, ಅಂಚೆ ತಲುಪದಿದ್ದ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಂಪರ್ಕಿಸಿ ಕೌನ್ಸೆಲಿಂಗ್ ದಿನಾಂಕದಂದು ಪ್ರವೇಶ ಪತ್ರದೊಂದಿಗೆ ಹಾಜರಾಗಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ತಿಳಿಸಿದೆ.