ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೆತ್ತವರ ಋಣ ಮರೆಯಬೇಡಿ: ಅಲ್ಲಾಗಿರಿರಾಜ್

Rashmi Kasaragodu
Updated On : 3 May 2014, 12:14 pm

ಕ.ಪ್ರ. ವಾರ್ತೆ    ಸಿಂಧನೂರು    ಮೇ 2
ವಿದ್ಯಾರ್ಥಿಗಳು ವಿದೇಶಿ ಸಂಸ್ಕೃತಿಗೆ ಮಾರು ಹೋಗದೆ ಬದುಕಿನ ಸಾರ್ಥಕತೆಯನ್ನು ಅರ್ಥ ಮಾಡಿಕೊಂಡು ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ತಂದೆ ತಾಯಿಗಳ ಋಣವನ್ನು ತೀರಿಸಬೇಕೆಂದು ಗಜಲ್ ಕವಿ ಅಲ್ಲಾಗಿರಿರಾಜ್ ಕರೆ ನೀಡಿದರು.
ನಗರದ ಎಕ್ಸಲೆಂಟ್ ಪದವಿ ಕಾಲೇಜಿನಲ್ಲಿ ಬಿಕಾಂ ಮತ್ತು ಬಿಎ ಅಂತಿಮ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಹಿಂದೆ ಚಲನಚಿತ್ರ ಗೀತೆಗಳು ಕುಟುಂಬ ಮತ್ತು ಸಮಾಜದಲ್ಲಿ ಆದರ್ಶ ಮೌಲ್ಯಗಳನ್ನು ಬಿತ್ತುತ್ತಿದ್ದವು. ಪ್ರಸ್ತುತ ದಿನಮಾನದಲ್ಲಿ ಅವುಗಳು ಅರ್ಥ ಕಳೆದುಕೊಂಡಿವೆ. ಕಲೆ ಮತ್ತು ಸಾಹಿತ್ಯ ಮನಸ್ಸನ್ನು ಮುದಗೊಳಿಸಬೇಕೇ ಹೊರತು ವಿಕೃತಗೊಳಿಸಬಾರದು. ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು, ಜೀವನದ ಮುಖ್ಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಉತ್ತಮ ಮನುಷ್ಯರಾಗಿ: ಜ್ಞಾನಸೌರಭ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಆರ್‌ಜಿಎಂ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಮಧುಮತಿ ದೇಶಪಾಂಡೆ, ಇದೊಂದು ಆರಂಭಿಕ ಕೃತಿಯಾಗಿದ್ದು ವಿದ್ಯಾರ್ಥಿಗಳು ಮುಂದೊಂದು ದಿನ ಉತ್ತಮ ಸಾಹಿತಿಗಳಾಗಿ ಹೊರಹೊಮ್ಮುವ ಸೂಚನೆಗಳು ಕಂಡು ಬಂದಿವೆ. ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯುವ ಜೊತೆಗೆ ಉತ್ತಮ ಮನುಷ್ಯರಾಗುವುದು ಅತ್ಯಂತ ಮುಖ್ಯವಾಗಿದೆ. ಸಿದ್ದಯ್ಯ ಪುರಾಣಿಕರ ಹೇಳಿದಂತೆ ಮೊದಲು ಮಾನವನಾಗು ಎನ್ನುವ ವಚನವನ್ನು ಉದಾಹರಿಸಿದರು.
ಪತ್ರಕರ್ತ ಡಿ.ಎಚ್. ಕಂಬಳಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜಾಗತೀಕರಣದ ದಾಳಿಯಲ್ಲಿ ಶಿಕ್ಷಣ ಒಂದು ಸರಕಾಗಿರುವುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಚಾರ್ಯ ಹೊನ್ನುರ ಹುಸೇನ, ಆರ್‌ಡಿಸಿಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೀರೇಶ ಪಗಡದಿನ್ನಿ ಮತ್ತಿತರರು ಉಪಸ್ಥಿತರಿದ್ದರು. ಪರಶುರಾಮ ಮಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳಾದ ಶಾರದಾ, ಆನಂದ, ಪ್ರಸನ್, ಲಾಲಸಾಬ್, ಹಿರೇಲಿಂಗಪ್ಪ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಕ್ಸಲೆಂಟ್ ಪದವಿ ಕಾಲೇಜಿನ ಪ್ರಾಂಶುಪಾಲ ಅರುಣಕುಮಾರ ನಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಮಣ್ಣ ಹಿರೇಬೇರಿಗಿ ಸ್ವಾಗತಿಸಿದರು. ಅರುಣಕುಮಾರ ಬೇರಿಗಿ ನಿರೂಪಿಸಿದರು. ಖಲೀಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement