ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ

Rashmi Kasaragodu
Updated On : 4 May 2014, 3:00 am

ರಾಯಚೂರು: ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ನಗರದಲ್ಲಿ ಸಂಜೆಯಾಗುತ್ತಿದ್ದಂತೆಯೇ ಬಿರುಗಾಳಿ ಬೀಸಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ ಕಳೆದ ಕೆಲದಿನಗಳ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನತೆಗೆ ತಂಪಿನ ಅನುಭವವಾಯಿತು. ಆದರೆ ಬಿರುಗಾಳಿಗೆ ಕೈಕೊಟ್ಟ ವಿದ್ಯುತ್‌ನಿಂದ ಜನತೆ ತೊಂದರೆ ಪಡಬೇಕಾಯಿತು. ಸಂಜೆ 4.45ರ ಸುಮಾರಿಗೆ ಆರಂಭಗೊಂಡ ಬಿರುಗಾಳಿ ಸಹಿತ ಮಳೆಯು ಅರ್ಧ ಗಂಟೆ ಸುರಿಯಿತು. ಆದರೆ ಬಿರುಗಾಳಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ವಿದ್ಯುತ್ ಸಂಜೆ 7ರವರೆಗೆ ಮರಳಲಿಲ್ಲ. ಆನಂತರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟ ಮುಂದುವರಿದಿದ್ದರಿಂದ ಜನತೆ ತೊಂದರೆಗೆ ಸಿಲುಕಿದರು. ನಗರದಲ್ಲಿ ಸುರಿದ ಮಳೆ ವಾತಾವರಣದಲ್ಲಿ ತಂಪುತಂದಿತು. ಬಿರುಗಾಳಿ, ಮಳೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿತ್ತು. ತಾಲೂಕಿನ ಮಾಲದೊಡ್ಡಿ ಗ್ರಾಮದಲ್ಲಿ ಗುಡಿಸಲಿಗೆ ಹೊದಿಸಿದ ಮೇಲ್ಚಾವಣಿಯು ಬಿರುಗಾಳಿಗೆ ಸಿಲುಕಿ ಕಿತ್ತು ಹೋಗಿದೆ. ಗುಡುಗು ಸಹಿತ ಬಿರುಗಾಳಿಯಿಂದ ಕೂಡಿದ ಮಳೆಗೆ ಗ್ರಾಮೀಣ ಭಾಗದಲ್ಲಿ ಜನಜೀವನ ತೊಂದರೆಗೆ ಸಿಲುಕಿತೆಂದು ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement