ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಬದುಕು ಸಾರ್ಥಕ್ಯಕ್ಕೆ ಪ್ರಾಮಾಣಿಕ ಸೇವೆ'

Rashmi Kasaragodu
Updated On : 5 May 2014, 12:47 pm

ಕ.ಪ್ರ. ವಾರ್ತೆ    ಸೇಡಂ    ಮೇ 4
ಮನುಷ್ಯನ ಜೀವನ ಸಾರ್ಥಕವಾಗಲು ಮಾಡುವ ಸೇವೆಯಲ್ಲಿ ಪ್ರಾಮಾಣಿಕತೆ ಅಗತ್ಯ ಎಂದು ನಿಡಗುಂದದ ಕಂಚಾಳಕುಂಠಿ ನಂದೀಶ್ವರ ಮಠದ ಕರುಣೇಶ್ವರ ಸ್ವಾಮೀಜಿ ನುಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಸೇವಾ ನಿವೃತ್ತಿ ಪ್ರಯುಕ್ತ  ಪಟ್ಟಣದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಶಂಕರ ಮಠದ ಶಿವಶಂಕರ ಸ್ವಾಮೀಜಿ, ದಿಗ್ಗಾಂವನ ಸಿದ್ದವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಜಿಯಾವುಲ್ಲಾ ಕೆ., ನಿವೃತ್ತ ಜಂಟಿ ನಿರ್ದೇಶಕ ಐ.ಈ. ಬಳತ್ಕರ್, ಸಹಾಯಕ ಕೃಷಿ ನಿರ್ದೇಶಕ ಲಕ್ಷ್ಮಣ ಇದ್ದರು.
ಆಪದ್ಬಾಂಧವ ಬಿಡುಗಡೆ: ನಂತರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಆಪದ್ಬಾಂಧವ ಅಭಿನಂದನಾ ಗ್ರಂಥವನ್ನು ಚಿತ್ತಾಪುರ ಸೋಮಶೇಖರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಮಳಖೇಡ ದರ್ಗಾದ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ, ತೊಟ್ನಳ್ಳಿಯ ತ್ರಿಮೂರ್ತಿ ಸ್ವಾಮೀಜಿ, ಖ್ಯಾತ ರಂಗಕರ್ಮಿ ಎಲ್.ಬಿ.ಕೆ. ಆಲ್ದಾಳ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಕೃತಿ ಪರಿಚಯ ಮಾಡಿಕೊಟ್ಟರು. ಮುಕುಂದರೆಡ್ಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement