ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಧಿಕಾರಿಗಳ ನಿರ್ಲಕ್ಷ್ಯ: ಕಾಡಾದ ಮುದಗಲ್ ಕೆರೆ

Rashmi Kasaragodu
Updated On : 6 May 2014, 12:40 pm

ಮುದಗಲ್: ಪಟ್ಟಣದಲ್ಲಿನ ಎರಡು ಕೆರೆಗಳ ತುಂಬೆಲ್ಲಾ ಜಾಲಿಗಿಡಗಳು ದಟ್ಟವಾಗಿ ಬೆಳೆದು ನಿಂತಿರುವುದರಿಂದ ಕಾಡಾಗಿ ಪರಿವರ್ತನೆಗೊಂಡಿದ್ದು, ಕೆರೆ ಇತ್ತು ಎಂಬ ಕುರುಹು ಕೂಡಾ ಕಾಣದಂತಾಗಿದೆ.
ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಉಂಟಾದಾಗ ಮಹಿಳೆಯರು ಬಟ್ಟೆ ತೊಳೆಯಲು ಕೆರೆಯತ್ತ ಮುಖ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಕೆರೆ ತುಂಬೆಲ್ಲಾ ಜಾಲಿಗಿಡಗಳು ಬೆಳೆದ ಹಿನ್ನೆಲೆಯಲ್ಲಿ ಮಹಿಳೆಯರು ಕೆರೆ ಬಳಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಅದಲ್ಲದೇ ಕೆರೆ ನೀರಿನಲ್ಲಿ ಕೆಲ ವಾರ್ಡ್‌ಗಳಿಂದ ಹೊರಬರುವ ಚರಂಡಿ ನೀರು ಸೇರ್ಪಡೆಯಾಗುತ್ತಿರುವುದನ್ನು ಮನಗಂಡಿರುವ ಜನಸಾಮಾನ್ಯರು ಕೆರೆಯಿಂದ ದೂರ ಸರಿದಿದ್ದಾರೆ. ಕೆರೆ ನೀರೆಲ್ಲಾ ಮಲಿನಗೊಂಡು ಅಲ್ಲಿನ ಜಲಚರಿಗಳ ಜೀವಕ್ಕೆ ಸಂಚಕಾರವಾದರೂ ಕೂಡ ಸಂಬಂಧಿಸಿದ ಇಲಾಖೆ ಅಥವಾ ಪಪಂ. ಆಡಳಿತ ಮಂಡಳಿ ತಲೆ ಕೆಡಿಸಿಕೊಂಡಿಲ್ಲ. ಅನೇಕ ಬಾರಿ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಿ ಆಡಳಿತ ವರ್ಗಕ್ಕೆ ಮನವಿ ಸಲ್ಲಿಸಿದರೂ ಕೆರೆ ಅಭಿವೃಧ್ಧಿ ಹಾಗೂ ನಿರ್ವಹಣೆಗೆ ಮಾತ್ರ ಕೈ ಹಾಕಿಲ್ಲ. ಕೂಡಲೇ ಕೆರೆಗೆ ಕಾಯಕಲ್ಪ ನೀಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.


ಕನ್ನಡ ನಾಡು-ನುಡಿ ರಕ್ಷಣೆಗೆ ಕಸಾಪ ಕಾರ್ಯ ಶ್ಲಾಘನೀಯ:  ಚಿಲ್ಕಾರಾಗಿ


ಲಿಂಗಸ್ಗೂರು: ರಾಜಧಾನಿ ಬೆಂಗಳೂರನ್ನು ಅನ್ಯ ಭಾಷಿಗರು ಅಂತಾರಾಷ್ಟ್ರೀಯ ನಗರವೆಂದು ಘೋಷಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಇಂದಿನ ದಿನಮಾನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ, ಭಾಷೆ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ.ಬಿ. ಚಿಲಕಾರಾಗಿ ಹೇಳಿದರು. ಪಟ್ಟಣದ ಸರಕಾರಿ ಪಪೂ ಕಾಲೇಜು ಆವರಣದಲ್ಲಿ ಸೋಮವಾರ ಕಸಾಪ ಘಟಕದಿಂದ ಆಯೋಜಿಸಿದ್ದ ಕಸಾಪ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿ ಗಿರಿರಾಜ ಹೊಸಮನಿ, ಸಿ. ಶರಣಪ್ಪ, ಅಯ್ಯಪ್ಪ ಕವಿತಾಳ, ತುಕಾರಾಮ್, ವೆಂಕಟೇಶ, ಶರಣಗೌಡ ಅಗಸಿ ಮುಂದಿನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement