ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಮಿಕ ಹಿತರಕ್ಷಣೆಗೆ ಕಾನೂನಿನ ನೆರವು ಪಡೆಯಲು ಸಲಹೆ

Rashmi Kasaragodu
Updated On : 6 May 2014, 12:43 pm

ರಾಯಚೂರು: ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದ ಎನ್‌ಇಕೆಎಸ್ ಆರ್‌ಟಿಸಿ ಡಿಪೋ-2ರಲ್ಲಿ ಇತ್ತೀಚೆಗೆ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ. ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ಮಿಕರ ಹಿತ ರಕ್ಷಣೆಗಾಗಿ ಹಲವಾರು ಕಾನೂನು ರೂಪಿಸಿದ್ದು, ಜಿಲ್ಲಾ ಕಾನೂನು ಪ್ರಾಧಿಕಾರದ ವತಿಯಿಂದ ಕಾನೂನುಗಳ ಕುರಿತು ಮಾಹಿತಿಯನ್ನು ಪಡೆಯಬಹುದು ಎಂದರು.
ಮುಖ್ಯ ಅತಿಥಿ ಮುಖ್ಯ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಪಿ.ಜಿ. ಚಲುವಮೂರ್ತಿ, ಸಾರಿಗೆ ಸಂಸ್ಥೆಯ ಕಾರ್ಮಿಕರು ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ ಪಡೆದು ಜೀವನ ಕ್ರಮ ಉತ್ತಮವಾಗಿಸಿಕೊಳ್ಳಲು ಸಲಹೆ ನೀಡಿದರು.
ಕೈಗಾರಿಕೆ ವಿವಾದ ಕಾಯಿದೆ 1947ರ ಕುರಿತು ಹಿರಿಯ ವಕೀಲ ಬಸವರಾಜಪ್ಪ, ನೌಕರರ ಪರಿಹಾರ ಕಾಯಿದೆ 1923ರ ಕುರಿತು ವಕೀಲ ವಿ. ಸತೀಶ ಉಪನ್ಯಾಸ ನೀಡಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್. ಭಾನುರಾಜ್, ಕಾರ್ಯದರ್ಶಿ ಪ್ರಭುದೇವ ಪಾಟೀಲ್ ಮಾತನಾಡಿದರು.
ಜಿಲ್ಲಾ ಕಾರ್ಮಿಕ ಆಧಿಕಾರಿ ಆರತಿ ಸೇರಿ ಅನೇಕರಿದ್ದರು. ಅಧ್ಯಕ್ಷತೆಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಪಿ. ಯಶವಂತ ಕುಮಾರ ವಹಿಸಿ ಮಾತನಾಡಿದರು. ಎನ್‌ಇಕೆಎಸ್ ಆರ್ಟಿ ಸಿ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement