209.60 ಲಕ್ಷ ಅನುದಾನಕ್ಕೆ ಪ್ರಸ್ತಾವನೆ
ಲಿಂಗಸ್ಗೂರು: ಬಿರು ಬಿಸಿಲಿಗೆ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪರಿಹಾರಕ್ಕೆ ಪಂಚಾಯತ್ರಾಜ್ ಎಂಜಿನೀಯರಿಂಗ್ ಉಪ-ವಿಭಾಗದಿಂದ ಒಟ್ಟು 209.60 ಲಕ್ಷ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕುಡಿವ ನೀರು ಸಮಸ್ಯೆ ಇರುವ ಹಳ್ಳಿ, ತಾಂಡಾ, ದೊಡ್ಡಿಗಳನ್ನು ಪಟ್ಟಿ ಮಾಡಿ ಬೋರ್ವೆಲ್ ಕೊರೆಯಿಸುವುದು, ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ. ತಾಲೂಕಿನ 49 ಹಳ್ಳಿಗಳಲ್ಲಿ ಪೈಪ್ಲೈನ್ ದುರಸ್ತಿ ಮತ್ತು ಹೆಚ್ಚುವರಿ ಪೈಪ್ಲೈನ್ ಅಳವಡಿಕೆ, 21 ಹಳ್ಳಿಗಳಲ್ಲಿ ಬಾವಿಗಳಿಗೆ ಪಂಪ್ಸೆಟ್ ಅಳವಡಿಸಿ ನೀರು ಪೂರೈಕೆ, 21 ಹಳ್ಳಿಗಳಲ್ಲಿ ಕೊಳವೆಬಾವಿ ಮತ್ತು ಕೈ ಪಂಪ್ಗಳ ಮೂಲಕ ನೀರು ಸರಬರಾಜು ಹಾಗೂ 6 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನೀರು ಪೂರೈಕೆಗೆ 176.50 ಲಕ್ಷ: ತಾಲೂಕಿನ ಗೌಡೂರು ಗ್ರಾಪಂನ ಬಂಡೇಬಾವಿ, ಪೂಜಾರಿದೊಡ್ಡಿ, ಗೌಡೂರು ತಾಂಡಾ, ಗೌಡೂರು ಗ್ರಾಮ. ಪೈದೊಡ್ಡಿ ಗ್ರಾಪಂನ ರಾಯದುರ್ಗ ಬಳಿದ ಹಂದಿಬಗದಿ ದೊಡ್ಡಿ, ಯರಜಂತಿಯ ಮಕಾಶೇರದೊಡ್ಡಿಋ, ಕಬ್ಬೇರದೊಡ್ಡಿಗೆ ತಲಾ 5 ಲಕ್ಷ. ಹೂನೂರು ಗ್ರಾಪಂನ ಅಂಕಲಿಮಠ ಕ್ರಾಸ್ ತಲೆಕಟ್ಟಿಗೆ 2 ಲಕ್ಷ, ಹೊನ್ನಳ್ಳಿ ಗ್ರಾಪಂನ ಯರಡೋಣ ಗ್ರಾಮಕ್ಕೆ 5 ಲಕ್ಷ, ಗುಡದನಾಳ ಗ್ರಾಮಕ್ಕೆ 2 ಲಕ್ಷ. ಕಾಳಾಪುರ ಗ್ರಾಪಂನ ಮಿಂಚೇರಿಗೆ 2 ಲಕ್ಷ. ಬಯ್ಯಾಪುರ ಗ್ರಾಪಂನ ಪೂಜಾರಿ ತಾಂಡಕ್ಕೆ 3 ಲಕ್ಷ. ನರಕಲದಿನ್ನಿ ಗ್ರಾಮಕ್ಕೆ 5 ಲಕ್ಷ. ನಾಗರಹಾಳ ಗ್ರಾಪಂನ ತೊಂಡಿಹಾಳ ಗ್ರಾಮಕ್ಕೆ 1 ಲಕ್ಷ, ಕಮಲದಿನ್ನಿಗೆ 5 ಲಕ್ಷ. ಈಚನಾಳ ಗ್ರಾಪಂನ ನೀರಲಕೇರಿಗೆ 3 ಲಕ್ಷ, ಕೆಸರಟ್ಟಿ ತಾಂಡಾಕ್ಕೆ 2 ಲಕ್ಷ, ಯರಗುಂಟಿಗೆ 2 ಲಕ್ಷ.
ಆನ್ವರಿ ಗ್ರಾಪಂನ ಚುಕನಟ್ಟಿಗೆ 5 ಲಕ್ಷ, ಆನ್ವರಿ ಗ್ರಾಮಕ್ಕೆ ಹೆಚ್ಚುವರಿ ಪೈಪ್ಲೈನ್ಗೆ 5 ಲಕ್ಷ, ಆನ್ವರಿ ತೆರೆದ ಬಾವಿಯಿಂದ ನೀರು ಸರಬರಾಜಿಗೆ 5 ಲಕ್ಷ, ಹಿರೇನಗನೂರಿಗೆ 5 ಲಕ್ಷ, ವಂದಲಿಹೊಸೂರು, ಅಮರೇಶ್ವರ ಬಳಿ ದೊಡ್ಡಿಗೆ 2 ಲಕ್ಷ. ದೇವರಭೂಪೂರ ಗ್ರಾಪಂನ ದೇವರಭೂಪೂರಗೆ 5 ಲಕ್ಷ, ಗಲಗಿನದೊಡ್ಡಿಗೆ 4 ಲಕ್ಷ, ಖಾದರಸಾಬದೊಡ್ಡಿಗೆ 4 ಲಕ್ಷ, ಗುಮೇದಾರದೊಡ್ಡಿಗೆ 4 ಲಕ್ಷ, ಐದಬಾವಿ ಗ್ರಾಮಕ್ಕೆ 5 ಲಕ್ಷ, ಪರಂಪೂರ ತಾಂಡಾಕ್ಕೆ 2 ಲಕ್ಷ. ನಾಗಲಾಪುರ ಗ್ರಾಪಂನ ಛತ್ತರ ಗ್ರಾಮಕ್ಕೆ 5 ಲಕ್ಷ, ನಾಗಲಾಪುರಕ್ಕೆ 2 ಲಕ್ಷ, ರಾಮಜೀನಾಯಕ ತಾಂಡಾಕ್ಕೆ 5 ಲಕ್ಷ. ಗೆಜ್ಜಲಗಟ್ಟಾ ಗ್ರಾಮಕ್ಕೆ 2 ಲಕ್ಷ. ಸಂತೆಕೆಲ್ಲೂರು ಗ್ರಾಪಂನ ಸಂತೆಕೆಲ್ಲೂರುಗೆ 5 ಲಕ್ಷ, ಗೋನ್ವಾರ್ ಗ್ರಾಮಕ್ಕೆ 5 ಲಕ್ಷ.
ಅದೇ ರೀತಿ ರೋಡಲಬಂಡಾ(ತ) ಗ್ರಾಪಂನ ರೋಡಲಬಂಡಾ(ತ) 4 ಲಕ್ಷ, ಕಡ್ಡೋಣಕ್ಕೆ 5 ಲಕ್ಷ. ಮಾರಲದಿನ್ನಿ ಗ್ರಾಪಂನ ತೀರ್ಥಬಾವಿ- ಅಮರೇಶ್ವರಕ್ಕೆ 2.50 ಲಕ್ಷ, ಮಾರಲದಿನ್ನಿ ಜನತಾ ಕಾಲೋನಿಗೆ 1 ಲಕ್ಷ, ಉಸ್ಕಿಹಾಳಕ್ಕೆ 1 ಲಕ್ಷ. ಮಟ್ಟೂರು ಗ್ರಾಪಂನ ಬುದ್ದಿನ್ನಿಗೆ 3 ಲಕ್ಷ. ಮೆದಿಕಿನಾಳ ಗ್ರಾಮಕ್ಕೆ 5 ಲಕ್ಷ. ತಲೇಖಾನ್ ಗ್ರಾಪಂನ ಯರದೊಡ್ಡಿ ಹೊಸತಾಂಡಾಕ್ಕೆ 2 ಲಕ್ಷ, ಮಿಸ್ಕೀರಪ್ಪ ತಾಂಡಾಕ್ಕೆ 1 ಲಕ್ಷ, ಹಡಗಲಿ ತಾಂಡಾಕ್ಕೆ 1 ಲಕ್ಷ, ಸೋಮಲಾಪೂರ- ಗೊಲ್ಲರಹಟ್ಟಿಗೆ 1.50 ಲಕ್ಷ. ಬನ್ನಿಗೋಳ ಗ್ರಾಪಂನ ಚಿಕ್ಕಯರದಿಹಾಳಗೆ 5 ಲಕ್ಷ. ಗೊರೇಬಾಳ ಗ್ರಾಪಂನ ಯರಗುಂಟಾಕ್ಕೆ 5 ಲಕ್ಷ. ರೋಡಲಬಂಡಾ(ಯುಕೆಪಿ) ಗ್ರಾಪಂನ ಹಿರೇಜಾವೂರಿಗೆ 5 ಲಕ್ಷ ಸೇರಿದಂತೆ ಒಟ್ಟು 176.50 ಲಕ್ಷ ಕ್ರಿಯಾಯೋಜನೆ ತಯಾರಿಸಲಾಗಿದೆ.
ಸಮಸ್ಯಾತ್ಮಕ ಹಳ್ಳಿಗಳು: ಆನ್ವರಿ ಗ್ರಾಪಂನ ವಂದಲಿ-ಹೊಸೂರು, ಸರ್ಜಾಪೂರ ಗ್ರಾಪಂನ ಚಿಕ್ಕಹೆಸರೂರರಿಗೆ ತಲಾ 50 ಸಾವಿರ, ಆನ್ವರಿ, ಮಾವಿನಬಾವಿ ಗ್ರಾಪಂನ ಹುನಕುಂಟಿ, ಕಳ್ಳಿಲಿಂಗಸ್ಗೂರು, ಕನ್ನಾಳ ಗ್ರಾಪಂನ ತಿಮ್ಮಾಪುರ, ಗುರುಗುಂಟಾ ಪಟ್ಟಣಶೆಟ್ಟಿ ಬಾವಿ, ಪೈದೊಡ್ಡಿ ಗ್ರಾಪಂನ ಗೋಲಪಲ್ಲಿ, ಗದ್ದಿಗಿ ತಾಂಡಾ, ಕೋಠಾ ಗ್ರಾಮ, ರೋಡಲಬಂಡಾ(ಯುಕೆಪಿ) ಗ್ರಾಪಂನ ಹಿರೇಜಾವೂರು, ಈಚನಾಳ ಗ್ರಾಪಂನ ನೀರಲಕೇರಿ, ಅಂಕುಶದೊಡ್ಡಿ ಗ್ರಾಪಂನ ಕಾಟಗಲ್, ಗೆಜ್ಜಲಗಟ್ಟಾ ಗ್ರಾಪಂನ ನಿಲೋಗಲ್, ರೋಡಲಬಂಡಾ(ತ), ಯಲಗಟ್ಟಾ, ಗೌಡೂರು ಗ್ರಾಪಂನ ಮಾಚನೂರ, ಮಟ್ಟೂರು ಗ್ರಾಪಂನ ಗುಡಿಹಾಳ, ಸಂತೆಕಲ್ಲೂರು ಮತ್ತು ಗೋನವಾರ ಗ್ರಾಮಗಳಿಗೆ ತಲಾ 20 ಸಾವಿರ ಸೇರಿದಂತೆ ಒಟ್ಟು 21 ಹಳ್ಳಿಗಳಿಗೆ 4.50 ಲಕ್ಷ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಳವೆಬಾವಿ, ಕೈಪಂಪ್ ಸಮಸ್ಯೆ: ರೋಡಲಬಂಡಾ(ಯುಕೆಪಿ) ಗ್ರಾಪಂನ ಹಿರೇಜಾವೂರ, ಗೌಡೂರು ಗ್ರಾಪಂನ ಬೆಂಚಲದೊಡ್ಡಿ, ಗೆಜ್ಜಲಗಟ್ಟಾ ಗ್ರಾಪಂನ ವೀರಾಪೂರ, ದೇವರಭೂಪೂರ ಗ್ರಾಪಂನ ದೇವರಭೂಪೂರ, ಗುಮೇದಾರದೊಡ್ಡಿ, ಮೆಟ್ಟಮರಡಿದೊಡ್ಡಿ, ಮಡ್ಡೆಮ್ಮನದೊಡ್ಡಿ, ಖಾದರಸಾಬ ದೊಡ್ಡಿ, ಗಲಗಿನದೊಡ್ಡಿ, ಆನ್ವರಿ, ಅಮರೇಶ್ವರ ಕ್ಯಾಂಪ್, ವಂದಲಿ ಹೊಸೂರು, ಗೆಜ್ಜಲಗಟ್ಟಾ ಗ್ರಾಪಂನ ವೀರಾಪೂರ, ರೋಡಲಬಂಡಾ(ತ) ಗ್ರಾಪಂನ ಯಲಗಟ್ಟಾ, ಗುಂತಗೋಳ ಗ್ರಾಪಂನ ಜಲದುರ್ಗ, ಬನ್ನಿಗೋಳ ಗ್ರಾಪಂನ ಆದಾಪೂರ, ಉಪ್ಪಾರನಂದಿಹಾಳ ಗ್ರಾಪಂನ ರೇಷ್ಮಿತಾಂಡಾ, ಹೂನೂರು ಗ್ರಾಪಂನ ಅಂಕಲಿಮಠ ಕ್ರಾಸ್, ಗುರುಗುಂಟಾ ಗ್ರಾಪಂನ ಕಟ್ಟಿಮನೇರದೊಡ್ಡಿ, ಕಾಳಾಪೂರ ಗ್ರಾಪಂನ ಹಾಲದಾರದೊಡ್ಡಿ- ಫೂಲಬಾವಿ, ಹೊನ್ನಳ್ಳಿ ಗ್ರಾಪಂನ ಯರಡೋಣ ಗ್ರಾಮಗಳಿಗೆ ತಲಾ 60 ಸಾವಿರ ಸೇರಿದಂತೆ ಒಟ್ಟು 12.50 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಟ್ಯಾಂಕರ್ ನೀರು: ರೋಡಲಬಂಡಾ(ತ) ಗ್ರಾಪಂನ ಕಡ್ಡೋಣ, ಗೆಜ್ಜಲಗಟ್ಟಾ ಗ್ರಾಪಂನ ವೀರಾಪುರ, ಸಂತೆಕಲ್ಲೂರು, ಪೈದೊಡ್ಡಿ, ಕಾಳಾಪುರ ಗ್ರಾಪಂನ ಮಿಂಚೇರಿ, ಆನ್ವರಿ ಗ್ರಾಮಗಳಿಗೆ ತಲಾ 2.50 ಲಕ್ಷ ಸೇರಿದಂತೆ ಒಟ್ಟು 15 ಲಕ್ಷಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಂಡ ನಂತರ ಕಾರ್ಯ ಕೈಗೊಳ್ಳಲಾಗುವುದೆಂದು ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಜಿ.ಎಸ್. ಮಹಾಜನ್ ಸ್ಪಷ್ಟಪಡಿಸಿದ್ದಾರೆ.