ಲಂಚ ಸ್ವೀಕಾರ: ಎಚ್ಸಿ ಲೋಕಾಯುಕ್ತ ಬಲೆಗೆ
ದೇವದುರ್ಗ: ಇಲ್ಲಿನ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಾದಿಕ್ ಪಾಷಾ ಲಂಚ ಸ್ವೀಕರಿಸುತ್ತಿದ್ದ ವೇಳೆ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಅರಕೇರಾ ಗ್ರಾಮದ ಬಡೇಸಾಬ ಮತ್ತು ಖಾಸಿಂಸಾಬ ಎಂಬುವರ ವಿರುದ್ಧ ದೇವದುರ್ಗ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಬಡೇಸಾಬ್ ಜಾಮೀನಿಗಾಗಿ ಮನವಿ ಮಾಡಿದಾಗ ಸಾದಿಕ್ ಪಾಷಾ 8 ಸಾವಿರ ಲಂಚಕ್ಕಾಗಿ ಬೇಡಿಕೆಯಿರಿಸಿದ್ದರು. ಈ ಪೈಕಿ ಬಡೇಸಾಬ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿ ಲೋಕಾಯುಕ್ತರು ಹೆಣೆದ ಜಾಲದಲ್ಲಿ ಬುಧವಾರ ದೇವದುರ್ಗದ ಹೊಟೇಲ್ನಲ್ಲಿ ಐದು ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ನಡೆಸಿದ ಕಾರ್ಯಾಚರಣೆಗೆ ಸಾದಿಕ್ ಪಾಷಾ ಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.
ಈ ಕುರಿತು ದೇವದುರ್ಗ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.