ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೇವೆಯಿಂದ ಜನಾನುರಾಗಿಯಾಗಿ

Mainashree
Updated On : 12 May 2014, 10:55 am

ಶಹಾಪುರ: ಸಾಮಾನ್ಯವಾಗಿ ಯಾವುದೇ ಕಚೇರಿಗಳಲ್ಲಿ ಅಧಿಕಾರಗಳು ಬರುತ್ತಾರೆ. ಅದರ ಜೊತೆಗೆ ವರ್ಗಾವಣೆಗೊಂಡು ಹೋಗುತ್ತಾರೆ. ಆದರೆ ಅವರು ಸಾರ್ವಜನಿಕ ಸೇವೆಯಲ್ಲಿ ಮಾಡಿದ ಕೆಲಸಗಳಿಂದ ಅವರನ್ನ ಗುರುತಿಸುತ್ತಾರೆ ಎಂದು ಸಾಹಿತಿ ಶಿವಣ್ಣ ಇಜೇರಿ ಹೇಳಿದರು.
 ಪಟ್ಟಣದ ಜೀವ ವಿಮಾ ಕಚೇರಿಯಲ್ಲಿ ಅಧಿಕಾರಿಗಳಾಗಿ ಸೇವೆಸಲ್ಲಿಸಿ, ವರ್ಗಾವಣೆಗೊಂಡ ಜೀವವಿಮಾ ಅಧಿಕಾರಿ, ವಿವೇಕಾನಂದ ಕಲ್ಯಾಣಶೆಟ್ಟಿಯವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅಧಿಕಾರಿಗಳು ಕರ್ತವ್ಯ ಪರಿಜ್ಞಾನದ ಜತೆ ಸರಳ ಸಜ್ಜನಿಕ ವ್ಯಕ್ತಿತ್ವ ಹೊಂದಿರಬೇಕು. ಅಲ್ಲದೆ ಬಸವಾದಿ ಶರಣರ ವಿಚಾರಗಳ ಮೈಗೂಡಿಸಿಕೊಂಡಿದ್ದರೆ ಸಾಮಾನ್ಯ ಜನರ ನೋವು ನಲಿವುಗಳಿಗೆ ಸ್ಪಂದಿಸುವಂತ ಮನಸ್ಸು ಬರುವುದು ಸಹಜ ಎಂದರು. ಕಾರ್ಮಿಕ ಮುಖಂಡ ಎಸ್.ಎಂ. ಸಾಗರ ಮಾತನಾಡಿ, ಖಾಸಗಿ ಕಂಪನಿಯಲ್ಲಿದ್ದರೂ ಸಾರ್ವಜನಿಕ ಸೇವೆಯಲ್ಲಿ ಮುಂದಾಗಿದ್ದರು. ಒಬ್ಬ ಜನಸಾಮಾನ್ಯನ ವ್ಯಕ್ತಿಯ ಕೆಲಸವೂ ಬಿಡದೆ ಮಾಡವುದು ಅವರ ಜಾಯಮಾನವಾಗಿತ್ತು ಎಂದು ಹೇಳಿದರು.
 ಜೀವ ವಿಮಾಧಿಕಾರಿ ರಮೇಶ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ರಾವ್, ಸೈಯದ್ ಚಾಂದಸಾಬ್, ಪದ್ಮಾಕರ ಲಿಂಗಣ್ಣ, ಎಂ. ಸಜ್ಜನ್, ಶ್ರೀಕಾಂತ ಸರ್ಕಿಲ್, ಶಿವಶರಣ ನಾಗಲೋಟ ಹಾಗೂ ಇತರೆ ಜೀವವಿಮಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಮೋಹನಕಾಂತ ರಂಗದಳ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement