ಅಂಬೇಡ್ಕರ್, ಜಗಜೀವನರಾಂ ಜಯಂತ್ಯುತ್ಸವ
ಸಿಂಧನೂರು: ಚದುರಿರುವ ದಲಿತ ಉಪ ಜಾತಿಗಳು ಎಲ್ಲಿಯವರೆಗೆ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ಸಂವಿಧಾನದ ಆಶಯಗಳು ಪೂರ್ಣಗೊಳ್ಳುವುದಿಲ್ಲ. ಶೋಷಿತ ಸಮುದಾಯಗಳು ಒಂದಾಗುವ ಮೂಲಕ ಹೊಸ ಇತಿಹಾಸ ಬರೆಯಬೇಕಾಗಿದೆ ಎಂದು ಸರ್ಕಾರಿ ನೌಕರರ ಸಂಘದ ವಿಭಾಗೀಯ ಘಟಕದ ಮಾಜಿ ಅಧ್ಯಕ್ಷ ಬಾಲಸ್ವಾಮಿ ಕೊಡ್ಲಿ ಹೇಳಿದರು.
ತಾಲೂಕಿನ ಕೊಪ್ಪಳ ಕ್ಯಾಂಪ್‌ನಲ್ಲಿ ಅಂಬೇಡ್ಕರ್, ಜಗಜೀವನರಾಂ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.
ದಲಿತರ ಬಾಳನ್ನು ಉದ್ಧಾರ ಮಾಡಲು ಮಹಾತ್ಮರು ಹುಟ್ಟಿ ಬರುವುದಿಲ್ಲ. ನಿಮ್ಮ ಬದುಕನ್ನು ನೀವೇ ಹೋರಾಟದ ಮೂಲಕ ಕಂಡುಕೊಳ್ಳಬೇಕೆಂದು ಡಾ. ಅಂಬೇಡ್ಕರ್ ಹೇಳಿದ್ದು ಅವರ ಕನಸು ನನಸು ಮಾಡಲು ಯುವಕರು ಪಣ ತೊಡಬೇಕಾದ ಅಗತ್ಯವಿದೆ ಎಂದು ರಾಯಚೂರು ಜಿಲ್ಲಾ ದಲಿತ ಮುಖಂಡ ಅಂಬಣ್ಣ ಆರೋಲಿ ಅಭಿಪ್ರಾಯಪಟ್ಟರು.
ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಆರ್. ಅಂಬ್ರೂಸ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಶರಣಯ್ಯಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಸುಭಾಸ್ ಫ್ರಾಂಕ್ಲಿನ್, ಮುಖಂಡರಾದ ವೀರಭದ್ರಪ್ಪ ಮಲ್ಲಾಉರ, ಜಿ. ಚೌರಪ್ಪ, ಆರೋಗ್ಯಪ್ಪ ಪನ್ನೂರು, ಸಮಾಜ ಸೇವಕ ಅಜಿತ ಓಸ್ತವಾಲ್, ಶಿವಕುಮಾರ ಸ್ವಾಮಿ ತಡಕಲ್, ಬಿಜೆಪಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಅಶೋಕ ಉಮಲೂಟಿ, ಜವಳಗೇರಾ ಗ್ರಾಪಂ ಮಾಜಿ ಅಧ್ಯಕ್ಷ ಜಾನಪ್ಪ ದೊಡ್ಡಮನಿ, ಜಿ.ಬಿ. ರಾಜು, ಆನಂದ, ಶಿಕ್ಷಕ ವೆಂಕಟೇಶ, ಜವಳಗೇರಾ ಅಯ್ಯಪ್ಪ, ಯಮನೂರಪ್ಪ, ಅಂಬಣ್ಣ, ಕೊಪ್ಪಳ ಕ್ಯಾಂಪ್ ಮುಖಂಡರಾದ ಕೆ. ಕರಿಯಪ್ಪ, ಕೆ. ಹನುಮಂತ, ಜನಾರ್ದನ, ಕೆ. ರಾಮುಲು. ಎ. ವೆಂಕಟೇಶ, ರಾಮಾಂಜನೇಯ, ಜಂಗ್ಲೆಪ್ಪ ಇದ್ದರು.