ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉಳಿಮೇಶ್ವರದಲ್ಲಿ ನೀರಿಗಾಗಿ ಪರದಾಟ

Mainashree
Updated On : 13 May 2014, 10:38 am

ಮುದಗಲ್: ಸಮೀಪದ ನಾಗಲಾಪುರ ಗ್ರಾಪಂ ವ್ಯಾಪ್ತಿಯ ಉಳಿಮೇಶ್ವರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿವ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.
ನಿರಂತರ ಜ್ಯೋತಿ ಯೋಜನೆಗೆ ವಿದ್ಯುತ್ ಸಂಪರ್ಕ ನೀಡಲು ವಿದ್ಯುತ್ ಕಡಿತಗೊಳಿಸಿರುವುದು ಒಂದೆಡೆಯಾದರೆ ಮಳೆ- ಗಾಳಿಗೆ ವಿದ್ಯುತ್ ಕಡಿತ ಮಾಡಿರುವುದು ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಗ್ರಾಮದಲ್ಲಿರುವ ಏಕೈಕ ಕೈಪಂಪ್‌ಗೆ ಮಹಿಳೆಯರು, ಮಕ್ಕಳು ನೀರು ಪಡೆಯಲು ಮುಗಿಬೀಳುವಂತಾಗಿದೆ.
ಇದು ಸಾಲದಕ್ಕೆ ಕೆಲವರು ಖಾಸಗಿ ವ್ಯಕ್ತಿಗಳ ಬೋರ್‌ವೆಲ್, ಬಾವಿಗಳಿಗೆ ಅಲೆದು ನೀರು ತಂದು ಕುಡಿಯಬೇಕಾಗಿದೆ. ಖಾಸಗಿ ವ್ಯಕ್ತಿಗಳ ತೆರೆದಬಾವಿಗೆ ತೆರಳಿದರೆ ಘಂಟೆಗಟ್ಟಲೇ ನಿಂತು ನೀರು ಪಡೆಯಬೇಕಾದ ಸಂದಿಗ್ನ ಪರಿಸ್ಥಿತಿ ಎದುರಾಗಿದೆ. ಕೂಡಲೇ ಗ್ರಾಪಂ ಆಡಳಿತ ಗ್ರಾಮದಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಉಳಿಮೇಶ್ವರ ಗ್ರಾಮದ ವೆಂಕನಗೌಡ, ಭೀಮಪ್ಪ, ಮೈಲಾರಿ, ಯಂಕೋಬ, ಮಲ್ಲಮ್ಮ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement