ಬಾಂಬ್ ನಿಷ್ಕ್ರಿಯ ತಜ್ಞರ ತಂಡ ಭೇಟಿ
ಚಿತ್ತಾಪುರ: ಇಲ್ಲಿನ ಮೊಗಲಾ ಗ್ರಾಮದ ಹತ್ತಿರ ಶನಿವಾರ ಬೆಳಿಗ್ಗೆ ಕೆಲ ದುಷ್ಕರ್ಮಿಗಳು ರೈಲು ಹಳಿ ಸ್ಪೋಟಕ್ಕೆ ವಿಫಲ ಯತ್ನ ನಡೆಸಿದ ಸ್ಥಳಕ್ಕೆ ರಾಜ್ಯ ಬಾಂಬ್ ನಿಷ್ಕ್ರಿಯ ತಜ್ಞರ ಹಾಗೂ ವಿಶ್ಲೇಷಕರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶಶಿಕುಮಾರ ಹಾಗೂ ಸುಕುಮಾರ್ ಅವರನ್ನೊಳಗೊಂಡ ತಂಡ ಸ್ಥಳ ಪರಿಶೀಲಿಸಿ, ಸ್ಫೋಟಕಗಳ ಪರಿಶೀಲನೆ ನಡೆಸಿದರು. ಸಿಪಿಐ ಶಂಕರಗೌಡ, ಪಿಎಸ್ಐ ಸಂಜೀವ ಕುಮಾರ ಜತೆಯಲ್ಲಿದ್ದರು.